ತೆಲುಗು ನಟಿ ಸಮಂತಾ ರುತುಪ್ರಭು ಮೊದಲ ಮದುವೆಯಿಂದ ದೂರ ಬಂದ ಮೇಲೆ, ಡಿವೋರ್ಸ್ ಪಡೆದ ಮೇಲೆ ತಾನಾಯ್ತು ತನ್ನ ಕೆಲಸವಾಯ್ತು ಅಂತ ಬ್ಯುಸಿಯಾಗಿದ್ರು. ಅತ್ತ ನಾಗಚೈತನ್ಯಾ ಎರಡನೇ ಮದುವೆಯೂ ಆಗಿದ್ದಾಯ್ತು. ನಂತರದ ದಿನಗಳಲ್ಲಿ ಸಮಂತಾ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಚಾರ ಗುಲ್ಲೆದ್ದಿತ್ತು. ಇದೀಗ ಅದಕ್ಕೆ ಅಧಿಕೃತವಾದ ಮುದ್ರೆ ಒತ್ತಿದ್ದಾರೆ. ಸಮಂತಾ ಹಾಗೂ ರಾಜ್ ಮದುವೆಯಾಗಿದ್ದಾರೆ.
ಇಬ್ಬರ ವಿವಾಹ ಮಹೋತ್ಸವ ಸರಳವಾಗಿ ಈಶಾ ಯೋಗ ಕೇಂದ್ರದ ಒಳಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಲಕಗಿನ ಜಾವವೇ ಭೈರವಿ ದೇವಸ್ಥಾನದಲ್ಲಿ ಮದುವೆ ಕಾರ್ಯ ನಡೆದಿದೆ. ತುಂಬಾ ಸರಳವಾಗಿ ನಡೆದಿರುವ ಈ ವಿವಾಹ ಮಹೋತ್ಸವಕ್ಕೆ 30 ಜನ ಆತ್ಮೀಯರನ್ನ ಮಾತ್ರ ಕರೆಸಲಾಗಿತ್ತಂತೆ. ಇನ್ನು ಸಮಂತಾ ಈ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯನ್ನುಟ್ಟು ಕಂಗೊಳಿಸಿದ್ದಾರೆ ಎನ್ನಲಾಗಿದೆ. ಮದುವೆಯಲ್ಲಿ ಸಮಂತಾ ಎಷ್ಟು ಬ್ಯೂಟಿಫುಲ್ ಆಗಿ ಕಂಡಿದ್ದಾರೆ ಎಂಬುದನ್ನ ಅವರು ಫೋಟೋ ವಿಡಿಯೋ ಶೇರ್ ಮಾಡಿದ ನಂತರವಷ್ಟೇ ಗೊತ್ತಾಗಲಿದೆ.
ಹಾಗೇ ಸಮಂತಾ ಹಾಗೂ ನಿಡುಮೋರೆ ಇಬ್ಬರ ಸ್ನೇಹ, ಸಂಬಂಧ ಫ್ಯಾಮಿಲಿ ಮ್ಯಾನ್ ವೆಬ್ 2 ಸಿರೀಸ್ ಮೂಲಕ ಶುರುವಾಗಿತ್ತು. ಸ್ನೇಹ ಅಲ್ಲಿಂದ ಪ್ರೀತಿಯಾಗಿ ಬದಲಾಗಿದೆ. ಇದೀಗ ಅಧಿಕೃತವಾಗಿ ಮದುವೆಯ ಮುದ್ರೆಯನ್ನ ಒತ್ತಿದ್ದಾರೆ. ಇಬ್ಬರ ಕಡೆಯಿಂದ ಮದುವೆ ಬಗ್ಗೆ ಇನ್ನು ಯಾವುದೇ ರೀತಿಯ ಅಧಿಕೃತ ಘೋಷಣೆ ಬಂದಿಲ್ಲ. ಇಡೀ ಅಭಿಮಾನಿ ಸಮೂಹವೇ ಆ ದಿನಕ್ಕೋಸ್ಕರ ಕಾಯ್ತಿದೆ. ಇದೀಗ ಸಮಂತಾ ಮದುವೆ ಫೋಟೋ ಗಳನ್ನು ತಮ್ಮಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದ್ದು, ಎಲ್ಲರೂ ಶುಭ ಹಾರೈಸುತ್ತಿದ್ದಾರೆ.






