ಬೆಂಗಳೂರು: ಈಶ್ವರಪ್ಪ ಅವರ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ವಿಧಾಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಮಧ್ಯೆ ನಿರ್ದೇಶಕ ಪ್ರೇಮ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಹಲವರಿಗೆ ಹಲವು ಪ್ರಶ್ನೆಗಳು ಹುಟ್ಟಿವೆ.
ಸದ್ಯ ಪ್ರೇಮ್ ತಮ್ಮ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಪ್ರಮೋಷನ್ ತಯಾರಿಯಲ್ಲಿದ್ದಾರೆ. ಹೀಗಾಗಿ ಓಡಾಟ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಪ್ರೇಮ್ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಪ್ರೇಮ್, ನನಗೆ ರಾಜಕೀಯಕ್ಕೆ ಬರೋದಕ್ಕೆ ಆಸಕ್ತಿಯಿಲ್ಲ. ಆದ್ರೆ ಹೊರಗೆ ನಿಂತು ಸಪೋರ್ಟ್ ಮಾಡ್ತೀನಿ. ಎಲ್ಲಾ ರಾಜಕೀಯ ಪಕ್ಷದಲ್ಲೂ ನನಗೆ ಸ್ನೇಹಿತರು, ಹಿತೈಶಿಗಳಿದ್ದಾರೆ. ರಾಜಕೀಯಕ್ಕೆ ಸೇರದೆ ಇದ್ರು. ಕೆಲಸ ಮಾಡ್ತೇನೆ. ಸದ್ಯ ರಕ್ಷಿತಾ ಬಿಜೆಪಿಯಲ್ಲಿದ್ದಾರೆ. ಎಲೆಕ್ಷನ್ ಗೆ ನಿಲ್ಲುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಇದೇ ವೇಳೆ ಮಂಡ್ಯ ಚುನಾವಣೆ ಬಗ್ಗೆ ಮಾತಾಡಿದ್ದು, ಅಂಬಿ ಅಣ್ಣ ಇದ್ದಾಗಲೇ ಅವರ ಎದುರು ನಿಲ್ಲಲು ಹೇಳಿದ್ರು. ಆದ್ರೆ ನಾನು ಆಗಲೂ ನಿಲ್ಲಲಿಲ್ಲ ಎಂದಿದ್ದಾರೆ.