Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

Facebook
Twitter
Telegram
WhatsApp

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು ನೀಡಿದ್ದಾರೆ. ಸ್ವಾಮೀಜಿಗಳು ಸಲ್ಲಿಕೆ ಮಾಡಿರುವ ಆಸ್ತಿಯ ವಿವರದ ಪ್ರಕಾರ ದಿಂಗಾಲೇಶ್ವರ ಸ್ವಾಮೀಜಿಯ ಬಳಿ ಒಟ್ಟು 9.74 ಕೋಟಿ ರೂಪಾಯಿ ಇದೆ.

 

ದಿಂಗಾಲೇಶ್ವರ ಸ್ವಾಮೀಜಿ ನೀಡಿರುವ ಮಾಹಿತಿ ಪ್ರಕಾರ, 1.22 ಕೋಟಿ ರೂಪಾಯಿ ಚರಾಸ್ಥಿಯಾಗಿದ್ದರೆ, 8.52 ಕೋಟಿ ರೂಪಾಯಿ ಸ್ಥಿರಾಸ್ತಿಯಾಗಿದೆ. 39.68 ಲಕ್ಷ ರೂಪಾಯಿ ಸಾಲ ಇದೆ. ಕೈಯಲ್ಲಿ 1 ಲಕ್ಷದ 25 ಸಾವಿರ ರೂಪಾಯಿ ನಗದು ಇದೆ. ಹಲವು ಬ್ಯಾಂಕ್ ಗಳಲ್ಲಿ ಹನ್ನೊಂದು ಲಕ್ಷ ಹಣ ಇಡಲಾಗಿದೆ. ಜೊತೆಗೆ 4.75 ಲಕ್ಚದ ಶೇರುಗಳನ್ನು ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಬಾಂಡ್ ಇಡಲಾಗಿದೆ. ಸ್ವಾಮೀಜಿ ಮೇಲೆ ಮೂರು ಪ್ರಕರಣಗಳಿವೆ.

 

ಎರಡು ಟೊಯೊಟೊ ಇನೋವಾ ಕಾರು, ಒಂದು ಟ್ರಾಕ್ಟರ್‌ ಹಾಗೂ ಒಂದು ಬಸ್‌ ಅನ್ನು ಹೊಂದಿದ್ದಾರೆ. ಜೊತೆಗೆ 4.35 ಲಕ್ಷ ರೂ. ಮೌಲ್ಯದ 7 ಕೆಜಿ 820 ಗ್ರಾಂ ಬೆಳ್ಳಿ ಹೊಂದಿದ್ದು, 1,17 ಲಕ್ಷ ರೂ. ಮೌಲ್ಯದ 18.9 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಈ ಮೂಲಕ ಒಟ್ಟು 1.22 ಕೋಟಿ ರೂ. ಚರಾಸ್ತಿಯನ್ನು ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿಕೊಂಡಿದ್ದಾರೆ. 23 ಎಕರೆ 17 ಗುಂಟೆ ಕೃಷಿ ಭೂಮಿಯನ್ನು ಹೊಂದಿದ್ದು, 19 ಕಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ಶಾಲಾ ಕಟ್ಟಡ ಕೂಡ ಇದ್ದು, ಒಟ್ಟು, 8.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯಡಿಯೂರಪ್ಪ ಮಾತಿಗೆ ಯತ್ನಾಳ್ ಸಮ್ಮತಿ : ರೆಬೆಲ್ ಸೈಲೆಂಟ್ ಆದ್ಮೇಲೆ ಉಳಿದವರು ಆಗ್ತಾರಾ..?

ನವದೆಹಲಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಮುಂಚೆ ಯಡಿಯೂರಪ್ಪ ಅಂಡ್ ಸನ್ಸ್ ವಿರುದ್ಧ ಮಾತಿನ ಯುದ್ಧವನ್ನೇ ಸಾರುತ್ತಿದ್ದರು. ಆದರೆ ಈಗ ಕೇಂದ್ರ ಶಿಸ್ತು ಸಮಿತಿ‌ ಮುಂದೆ ಹಾಜರಾದ ಬೆನ್ನಲ್ಲೇ ಯತ್ನಾಳ್ ಉಲ್ಟಾ ಹೊಡೆಯುತ್ತಿದ್ದಾರೆ.

ಮತ್ತೆ ಹೆಚ್ಚಾಯ್ತು ಅಡಿಕೆ ಬೆಲೆ : ರೈತರ ಮೊಗದಲ್ಲಿ ಸಂತಸವೋ ಸಂತಸ

ಅಡಿಕೆ ಬೆಳೆಗಾರರಲ್ಲಿ ಮತ್ತೆ ಖುಷಿಯಾಗುವ ದಿನ ಸಂಭವಿಸಿದೆ. 55 ಸಾವಿರ ರೂಪಾಯಿಗೆ ತಲುಪಿತ್ತು. ಆದರೆ ಇದ್ದಕ್ಕಿದ್ದ ಹಾಗೇ 44 ಸಾವಿರಕ್ಕೆ ಬಂದು ನಿಂತಿತ್ತು. ಇದು ಅಡಿಕೆ ಬೆಳೆಗಾರರಿಗೆ ಶಾಕ್ ಆಗಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳುವ

ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶಾಕ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಮಂಡ್ಯ: ಇತ್ತೀಚೆಗಷ್ಟೇ ಸಂಪುಟ ಪುನರ್ ರಚನೆ ಆಗುತ್ತೆ ಎಂಬ ಚರ್ಚೆ ಜೋರಾಗಿತ್ತು. ಸಂಪುಟ ಪುನರ್ ರಚನೆಯಾಗುತ್ತೆ ಎಂದಾಗಲೇ ಈ ಬಾರಿ ನಮಗೂ ಅವಕಾಶ ಸಿಗುತ್ತೆ ಎಂಬನಿರೀಕ್ಷೆ ಹಲವರಿಗೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟ

error: Content is protected !!