ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ವಿರುದ್ದ ಪತ್ರ ಬರೆದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ವಿಪಕ್ಷಗಳನ್ನು ಅಣಿಯುವ ಕಾರ್ಯಕ್ರಮವನ್ನಾಗಿಸುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
‘ಸಿಕಲ್ ಸೆಲ್ ರಕ್ತಹೀನ ನಿವಾರಣೆ ಕಾರ್ಯಕ್ರಮವದು.ಸರ್ಕಾರಿ ಕಾರ್ಯಕ್ರಮವಾಗಿತ್ತು. ಆದರೆ ಈ ಕಾರ್ಯಕ್ರಮವನ್ನು ವಿಪಕ್ಷಗಳನ್ನ ಅಣಿಯುವುದಕ್ಕೆ ಬಳಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಿಗೆ ವರ್ಚುವಲ್ ನಲ್ಲಿ ಚರ್ಚೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ವಿಕಾಸಸೌಧದಿಂದ ವರ್ಚುವಲ್ ಮೀಟಿಂಗ್ ನಲ್ಲಿ ಭಾಗಿಯಾದೆ. ಆದರೆ ಸಿಕಲ್ ಸೆಲ್ ಬಗ್ಗೆ ಚರ್ಚೆ ನಡೆಸದೆ, ವಿಪಕ್ಷಗಳನ್ನು ಅಣಿಯಲು ಶುರಿ ಮಾಡಿದರು.
ಸಿಕಲ್ ಸೆಲ್ ಬಗ್ಗೆ ಪ್ರಧಾನಿ ಮೋದಿಯವರು ಈಗ ಮಾತನಾಡುತ್ತಿದ್ದಾರೆ. ಆದರೆ 2016ರಲ್ಲಿ ಕಾಂಗ್ರೆಸ್ ಇದರ ಬಗ್ಗೆ ತಿಳಿಸಿತ್ತು. ಮೈಸೂರಿನ ಬುಡಕಟ್ಟಿ ಜನಾಂಗ್ವರ ತಪಾಸಣೆ ನಡೆಸಿ, ಪಾಸಿಟಿವ್ ಬಂದವರಿಗೆ ಆರೋಗ್ಯ ಸೇವೆ ಒದಗಿಸಿತ್ತು. ಹೀಗಾಗಿ ಮೋದಿಯವರು ವರ್ಚುವಲ್ ಸಭೆಯಲ್ಲಿ ಕರ್ನಾಟಕದ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆಯಿಂದ ನಾನು ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ನಿರೀಕ್ಷೆ ಸುಳ್ಳಾಯಿತು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.