ಬೆಂಗಳೂರು; ಇಂದಿನಿಂದ ರಾಜ್ಯದಲ್ಲಿ ಹಲವು ಬದಲಾವಣೆಗಳು ಆಗಿವೆ. ಹಲವು ವಸ್ತುಗಳ ದರ ಏರಿಕೆಯೂ ಆಗಿದೆ. ಇದರ ಬೆನ್ನಲ್ಲೇ ಡಿಸೇಲ್ ದರವೂ ಏರುಕೆಯಾಗಿದ್ದು, ಇಂದು ಮಧ್ಯರಾತ್ರಿಯಿಂದಾನೇ ದರ ಏರಿಕೆ ಅನ್ವಯವಾಗಲಿದೆ. ಡಿಸೇಲ್ ಮೇಲಿನ ಸೆಸ್ ದರ ಏರಿಸಿ, ರಾಜ್ಯ ಸರ್ಕಾರ ಆದೇಶ ನೀಡಿದೆ. ಡಿಸೇಲ್ ಮೇಲಿನ ಮಾರಾಟದ ತೆರಿಗೆಯನ್ನು ರಾಜ್ಯ ಸರ್ಕಾರ 2 ರೂಪಾಯಿ ಏರಿಕೆ ಮಾಡಿದೆ. ಡಿಸೇಲ್ ಮೇಲಿನ ಸೆಸ್ ದರ ಇದುವರೆಗೂ 18.44 ರಷ್ಡು ಇತ್ತು.

ಇದೀಗ ರಾಜ್ಯ ಸರ್ಕಾರ ದರ ಏರಿಕೆ ಮಾಡಿರುವ ಪರಿಣಾಮ ಡಿಸೇಲ್ ದರ ಏರಿಕೆಯಾಗಿದೆ. ಅಂದ್ರೆ ಇಂದು ಮಧ್ಯರಾತ್ರಿಯಿಂದಾನೇ ಡಿಸೇಲ್ ಮೇಲಿನ ತೆರಿಗೆ ಶೇಕಡಾ 21.17ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಸದ್ಯ ಡಿಸೇಲ್ ದರ 89.2 ಇದೆ. ಈಗ ಸೆಸ್ ದರ ಏರಿಕೆಯಾದ ಮೇಲೆ ಹೊಸ ದರದ ಆಧಾರದ ಮೇಲೆ 91 ರೂಪಾಯಿ 2 ಫೈಸೆ ಏರಿಕೆಯಾದಂತೆ ಆಗಿದೆ.

2021ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 25.92 ಕ್ಕೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 14.34ಕ್ಕೆ ಇಳಿಕೆ ಮಾಡಿತ್ತು. ಬಳಿಕ 2024ರ ಜೂನ್ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 29.84%ಗೆ ಏರಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44%ಗೆ ಏರಿಕೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 21.17%ಗೆ ಏರಿಕೆ ಮಾಡಿದೆ.

