Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಿದ್ದರಾಮಯ್ಯ ಹೇಳಿದ್ದೆ ಫೈನಲ್‌ ಮಾಡುತ್ತಾ ಹೈಕಮಾಂಡ್..? : ಯತೀಂದ್ರ ಹೇಳಿದ್ದೇನು..?

---Advertisement---

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯ ತಮ್ಮ ಕ್ಷೇತ್ರವನ್ನು ಫೈನಲ್ ಮಾಡಿದ್ದಾರೆ. ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೋಲಾರ ಸೇಫ್ ಪ್ಲೇಸ್ ಅಲ್ಲ ಅಂತ ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಈ ಬಾರಿ ಬಿಜೆಪಿಯನ್ನು ಮಟ್ಟ ಹಾಕಿ ಕಾಂಗ್ರೆಸ್ ಗೆಲ್ಲಬೇಕು, ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆಯನ್ನಿಟ್ಟುಕೊಂಡಿರುವ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಂತು ತಪ್ಪು ಮಾಡುತ್ತಿದ್ದಾರೆಂಬುದು ಹಲವರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಕೂಡ ಕೋಲಾರ ಜಿಲ್ಲೆಯ ಸಮೀಕ್ಷೆ ನಡೆಸಿದ್ದಾರೆ. ಎಲ್ಲವನ್ನು ಬದಿಗೊತ್ತಿ ಫೈನಲಿ ನಾನು ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದು ಘೋಷಿಸಿದ್ದಾರೆ. ಹೈಕಮಾಂಡ್ ನಿಂದ ಇದಕ್ಕೆ ಅಧಿಕೃತವಾದ ಒಪ್ಪಿಗೆ ಬರಬೇಕಿದೆ. ಆದರೆ ಸಿದ್ದರಾಮಯ್ಯ ಅವರ ಮಗ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಅಪ್ಪನ ಬಗ್ಗೆ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಲ್ಲುವುದು ಪಕ್ಕಾ ಆಗಿದೆ. ಅದಕ್ಕೆ‌ ಅಲ್ಲಿಯೇ ಮನೆ ಕೂಡ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, “ಅಪ್ಪನಿಗೆ ವರುಣಾ ಕ್ಷೇತ್ರದಲ್ಲಿಯೇ ನಿಲ್ಲಲು ಹೇಳಿದ್ದೆ. ಆದ್ರೆ ಅವರು ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದಿದ್ದಾರೆ. ಅಪ್ಪನ ವಿರುದ್ಧವಾಗಿ ಹೈಕಮಾಂಡ್ ಕೂಡ ಹೋಗಲ್ಲ” ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...