ಮೈಸೂರು: ರಾಜ್ಯ ಸರ್ಕಾರ ಕೋಟಿ ಕೋಟಿ ಸಾಲ ಮಾಡಿದೆ ಅಂತ ವಿರೋಧ ಪಕ್ಷದ ನಾಯಕರು ಆರೋಪ ಮಾಡ್ತಿದ್ದಾರೆ. ಈ ಸಂಬಂಧ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು, ಮೋದಿ ಎಷ್ಟು ಸಾಲ ಮಾಡಿದ್ದಾರೆ ಅಂತ ನೋಡಿದ್ದಾರಾ ಅವರು. ಸಾಲ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸಾಲ ಮಾಡದೆ ಅಭಿವೃದ್ಧಿ ಮಾಡುವುದಕ್ಕೆ ಆಗಲ್ಲ. ಕೆಲ ಮಾನದಂಡಗಳ ಮಿತಿಯಲ್ಲಿ ಮಾಡಿರೋದು. ಸಾಲ 25% ಒಳಗೆ ಇರಬೇಕು ಅನ್ನೋದು ಆ ಆಕ್ಟ್ ಹೇಳುತ್ತೆ.
ನಮ್ಮ ಸಾಲ ಏನಿದೆ ಅದು 25.94% ಇದೆ. 25 ಒಳಗಿದ್ಯಾ. ಅವರು ಬಹುಶಃ ಆಕ್ಟ್ ನ ಓದಿಕೊಳ್ಳುವುದು ಬಹಳ ಒಳ್ಳೆಯದು. ಕೇಂದ್ರದ ಸಾಲ ಎಷ್ಟಿದೆ ಅನ್ನೋದು ಗೊತ್ತಾ ನಿಮಗೆ. ಅಶೋಕನಿಗೆ ಗೊತ್ತಾ..? 218 ಲಕ್ಷ ಕೋಟಿ ಸಾಲ ಇದೆ. ಮೋದಿಯವರು ಬಂದ್ಮೇಲೆ 11 ವರ್ಷಕ್ಕೆ ಎಷ್ಟು ಸಾಲ ಮಾಡಿದ್ದಾರೆ ಅನ್ನೋದು ಗೊತ್ತಾ..? 165 ಲಕ್ಷ ಕೋಟಿ. ಅದು ಎಷ್ಟು ಪರ್ಸಂಟೇಜ್ ಇದೇ ಗೊತ್ತಾ. 55.6%. ನಮ್ಮದು 3% ಒಳಗೆ ಇದೆ. ನಮ್ಮದು ಜಿಡಿಪಿ ಎಷ್ಟು ಗೊತ್ತಾ 33,5,500 ಕೋಟಿ ಅಂದ್ರೆ ನಾವೂ 25% ಪರ್ಸೆಂಟ್ ಒಳಗೆ ಇದೆ. ಅದನ್ನ ತಿಳಿದುಕೊಳ್ಳುವುದಿ ಒಳ್ಳೆಯದು. ಹೆಚ್ಚಾಗಿ ಸಾಲ ಮಾಡಿದ್ದೀವಿ ಎಂಬುದು ಸತ್ಯಕ್ಕೆ ದೂರವಾದಂತ ಮಾತು. ಸಾಲ ಮಾಡಿದ್ದೀವಿ, ಮಾನದಂಡದ ಒಳಗೇನೆ ಸಾಲ ಮಾಡಿದ್ದೀವಿ ಎಂದಿದ್ದಾರೆ.
ಇದೇ ವೇಳೆ ಬಜೆಟ್ ಬಗ್ಗೆ ಮಾತನ್ನಾಡಿ, ನಾನು ಇದಿ 17ನೇ ಬಜೆಟ್ ಮಂಡನೆ ಮಾಡಿರೋದು. ಹೈಕಮಾಂಡ್ ಅವರು ಅವಕಾಶ ಕೊಟ್ಟರೆ ಇನ್ನು ಎರಡು ಮಂಡನೆ ಮಾಡ್ತೀನಿ. ರೆಕಾರ್ಡ್ ಮುರಿಯೋದು ದಾಖಲೆಯಲ್ಲ. ಜನ ಅವಕಾಶಗಳು ಕೊಟ್ಟರೆ ಮಂಡಿಸುತ್ತೇನೆ. ಹೈಕಮಾಂಡ್ ನವರ ಮೇಲೆ ವಿಶ್ವಾಸ ಇಲ್ಲದೆ ಇನ್ನ್ಯಾರ ಮೇಲೆ ಇಡೋದು ಎಂದಿದ್ದಾರೆ.




