ಕುಂದಾಪುರ ಪ್ರಾಂಶುಪಾಲರಿಗೆ ಸಲ್ಲಬೇಕಿದ್ದ ಪ್ರಶಸ್ತಿಯನ್ನು ತಡೆಹಿಡಿದರಾ ಮಧು ಬಂಗಾರಪ್ಪ ..? ಈ ಬಗ್ಗೆ ಕೊಟ್ಟ ಸ್ಪಷ್ಟನೆ ಏನು..?

1 Min Read

 

ಬೆಂಗಳೂರು: ಶಿಕ್ಷಣ ಇಲಾಖೆ ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿದೆ. ಇದರಲ್ಲಿ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೂ ಪ್ರಶಸ್ತಿ ಘೋಷಣೆ‌ ಮಾಡಲಾಗಿತ್ತು. ಆದರೆ ಇವರಿಗೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ ಎಂಬ ಆರೋಪ ಕೇಳಿ ಬಂದಿದೆ. ಹಿಜಾಬ್ ಗಲಾಟೆ ನೆನಪಿರಬಹುದು. ಉಡುಪಿಯಲ್ಲಿ ಶುರುವಾದ ಗಲಾಟೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿಯೇ ತಡೆಹಿಡಿದಿದ್ದರು. ಅದು ಇವರೆ. ಹೀಗಾಗಿ ಪ್ರಶಸ್ತಿಯನ್ನು ತಡೆಹಿಡಿದಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದಿನ ಸರ್ಕಾರ ಆದೇಶ ಮಾಡಿದ್ದಾಗ ಪ್ರಿನ್ಸಿಪಲ್ ವರ್ತನೆ ಸರಿ ಇರಲಿಲ್ಲ. ಹೀಗಾಗಿ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ. ಕ್ಯಾನ್ಸಲ್ ಮಾಡಿಲ್ಲ. ವಿದ್ಯಾರ್ಥಿಗಳ ಜೊತೆಗೆ ಪ್ರಿನ್ಸಿಪಲ್ ರಾಮಕೃಷ್ಣ ಅವರ ವರ್ತನೆ ಸರಿ ಇರಲಿಲ್ಲ. ಈ ಬಗ್ಗೆ ಮತ್ತೆ ತನಿಖೆ ಮಾಡಿ ವರದಿ ನೀಡುತ್ತಾರೆ. ಆ ಭಾಗದಲ್ಲಿ ರಾಜಕಾರಣ ಮಾಡುತ್ತಾರೆ. ಅದನ್ನ ಮಾಡೋದು ಬೇಡ ಎಂದಿದ್ದಾರೆ.

ಇನ್ನು ಯಾರೋ ದೂರು ಕೊಟ್ಟಿದ್ದಾರೆಂದು ಪ್ರಶಸ್ತಿ ತಡೆಹಿಡಿದಿದ್ದಾರೆ. ಹಿಜಾಬ್ ಬಗ್ಗೆ ಮಾತನಾಡಿದರೆ ಉತ್ತಮ ಅಲ್ಲ ಅಂತಾನಾ. ಇದು ಸರ್ಕಾರ ನಡೆದುಕೊಳ್ಳುವ ರೀತಿನಾ..? ಈ ರೀತಿಯ ಕಾರ್ಯದಲ್ಲಿ ಸರ್ಕಾರಗಳು ತೊಡಗಬಹುದೇ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *