ಐಪಿಎಲ್ 18ನೇ ಸೀಸನ್ ನಲ್ಲಿ ಮೊದಲ ಗೆಲುವು ಕಂಡಿದ್ದ ಆರ್ಸಿಬಿ ಇಂದು ಚೆನ್ನೈ ವಿರುದ್ದ ಸೆಣೆಸಾಡುತ್ತಿದೆ. ಈಗಾಗಲೇ ಚೆನ್ನೈನ ಎರಡು ವಿಕೆಟ್ ಅನ್ನು ಉರುಳಿಸಿದೆ. 197 ಟಾರ್ಗೆಟ್ ಅನ್ನು ಚೆನ್ನೈ ನೀಡಿದೆ. ಈ ಪಂದ್ಯವನ್ನ ಆರ್ಸಿಬಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆ ಇದೆ. ಹೈವೋಲ್ಟೇಜ್ ಪಂದ್ಯವನ್ನ ವೀಕ್ಷಕರು ಕುತೂಹಲದಿಂದ ವೀಕ್ಷಿಸ್ತಾ ಇದ್ದಾರೆ. ಆದರೆ ಇದರ ನಡುವೆ ಕೊಹ್ಲಿ ಬಗ್ಗೆ ಬೇಸರವೂ ಮೂಡಿದೆ.

ಸಾಮಾನ್ಯವಾಗಿ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ಎಲ್ಲಾ ಮ್ಯಾಚ್ ನಲ್ಲೂ ಒಳ್ಳೆ ರನ್ ಗಳಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಂದುಕೊಂಡಂತೆ ಆಡಿಲ್ಲ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಆರ್ಸಿಬಿ ಪರ ಓಪನಿಂಗ್ ಮಾಡಿದ ಸ್ಟಾರ್ ಬ್ಯಾಟರ್ ಫಿಲಿಪ್ ಸಾಲ್ಟ್ ಅವರು ಅಬ್ಬರಿಸಿದರು. ಕ್ರೀಸ್ನಲ್ಲಿ ಇರೋವರೆಗೂ ಎದುರಾಳಿಗಳನ್ನು ಕಾಡಿದರು. ತಾನು ಎದುರಿಸಿದ 16 ಬಾಲ್ನಲ್ಲಿ 5 ಭರ್ಜರಿ ಫೋರ್, 1 ಸಿಕ್ಸರ್ ಸಮೇತ 32 ರನ್ ಚಚ್ಚಿದ್ರು.

ಕೊಹ್ಲಿ ಬಂದವರು ಅದೇಕೋ ಆರಂಭದಿಂದಾನೇ ಸ್ಲೋ ಬ್ಯಾಟ್ ಬೀಸಿದರು. ಕೊಹ್ಲಿ ಆಡಿದ 30 ಬಾಲ್ ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 31 ರನ್ ಗಳಿಸಿದರು. ಇದನ್ನ ಕಂಡ ಆರ್ಸಿಬಿ ಅಭಿಮಾನಿಗಳು ಆತಂಕಗೊಂಡರು. ಆದರೆ ಇನ್ನುಳಿದವರು ಒಳ್ಳೆ ಪ್ರದರ್ಶನ ತೋರಿಸ್ತಾ ಇದಾರೆ. ಆರ್ಸಿಬಿ – ಚೆನ್ನೈ ಅನ್ನು ಸೋಲಿಸಲಿದೆ ಎಂದೇ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.


