ಬೆಂಗಳೂರು: ಸದನದಲ್ಲಿ ಚರ್ಚೆ ನಡೆಯುತ್ತಿದ್ದು, ಆಡಳಿತ ಪಲ್ಷ ವಿಪಕ್ಷಗಳ ಮಾತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಗರಂ ಆಗಿದ್ದಾರೆ.

ಬಿಜೆಪಿಯ ನವೀನ್ ಗೆ 18 ನಿಮಿಷಗಳ ಕಾಲಾವಕಾಶ ಹಿನ್ನಲೆ, ಹೊಸ ಸದಸ್ಯರಿಗೆ ಹೆಚ್ಚಿನ ಕಾಲಾವಕಾಶ ನೀಡಲು ಬಿಜೆಪಿಯ ಪ್ರಾಣೇಶ್ ಒತ್ತಾಯ ಮಾಡಲಾಗಿದೆ. ಬಿಜೆಪಿಯ ಪ್ರಾಣೇಶ್ ಒತ್ತಾಯಕ್ಕೆ ಕಾಗೇರಿ ಗರಂ ಆಗಿದ್ದಾರೆ. ನಾನು ನಿಮ್ಮ ಕೈನಲ್ಲಿ ಗುಲಾಮಾ ಆಗಿಬಿಟ್ಟಿದ್ದೀನಾ..? ಆಡಳಿತ ಪಕ್ಷದ ಪ್ರಾಣೇಶ್ ವಿರುದ್ಧ ಸಭಾಪತಿ ಗರಂ. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದು ಸಭಾಪತಿ ಹೊರಟ್ಟಿ ಗರಂ ಆಗಿದ್ದಾರೆ.

ವಿಪಕ್ಷಕ್ಕೆ ಹೆಚ್ಚಿನ ಅವಕಾಶ ನೀಡುವುದು ಸಂಪ್ರದಾಯ ಎಂಬ ಕಾಂಗ್ರೆಸ್ ನ ರವಿ ಅವರ ಹೇಳಿಕೆಗೆ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದ ಸದಸ್ಯರ ಸಂಖ್ಯೆಯ ಮೇಲೆ ಸಮಯ ನಿಗದಿ ಮಾಡಲಾಗುತ್ತೆ. ಲೋಕಸಭೆಯಲ್ಲಿ ಇರುವ ಸಂಖ್ಯೆಯ ಮೇಲೆ ಸಮಯ ನಿಗದಿ ಮಾಡಲಾಗುತ್ತೆ. ಪರಿಷತ್ ನಲ್ಲೂ ಸದಸ್ಯರಿಗೆ ಸಮಯ ನಿಗದಿ ಮಾಡಲಾಗುತ್ತೆ ಎಂದು ಸಭಾಪತಿ ತಿಳಿಸಿದ್ದಾರೆ.

