ಬೆಂಗಳೂರು: ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ಬಂಧನದ ಬೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. 82ನೇ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆದರೆ ಜಾಮೀನು ಸಿಕ್ಕಿಲ್ಲ. ಸಿಐಡಿಗೆ ನೋಟೀಸ್ ನೀಡಿ ಸೋಮವಾರಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿದೆ.
ಭೈರತಿ ಬಸವರಾಜ್ ತಮ್ಮ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದ ಕಾರಣ ಬಸವರಾಜ್ ಜಾಡು ಹಿಡಿದು ಸಿಐಡಿಯ ಮೂರು ತಂಡ ಹೊರಟಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಕೊನೆಯ ಲೈವ್ ಲೊಕೇಷನ್ ಪತ್ತೆಯಾಗಿದೆ. ಹೈಕೋರ್ಟ್ ನಿನ್ನೆ ಹೇಳಿರುವುದು ಮತ್ತೆ ವುಚಾರಣಾ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಜಾಮೀನು ತೆಗೆದುಕೊಳ್ಳುವ ತನಕ ರಕ್ಷಣೆ ಕೊಡುವುದಕ್ಕೆ ಬರಲ್ಲ ಅಂತ ಕೋರ್ಟ್ ಹೇಳಿತ್ತು. ಹೀಗಾಗಿ ನಿರೀಕ್ಷಣಾ ಜಾಮೀನು ಕೂಡ ಸಿಕ್ಕಿಲ್ಲ. ಈ ಹಿನ್ನೆಲೆ ಯಾವಾಗ ಬೇಕಾದರೂ ಭೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆ ಇದೆ.
ಬೆಳಗಾವಿಯಿಂದ ಅಧಿವೇಶನ ಮುಗಿದ ಬಳಿಕ ಮಹಾರಾಷ್ಟ್ರದ ಕಡೆಗೆ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಐಡಿ ಅಧಿಕಾರಿಗಳು ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಮಹಾರಾಷ್ಟ್ರ, ಗೋವಾ ಮೂಲಕ ಪುಣೆ ತಲುಪಿದ್ದಾರೆ ಎಂಬ ಮಾಹಿತಿ ಬಂದಿರುವ ಕಾರಣ, ಪೊಲೀಸರು ಅಲ್ಲೆಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ. ಭೈರತಿ ಬಸವರಾಜ್ ಅವರು ಕೂಡ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತಾ ಇದ್ದು, ಕೋರ್ಟ್ ನಲ್ಲಿ ಜಾಮೀನು ಸಿಕ್ಕ ಬಳಿಕವಷ್ಟೇ ಎಲ್ಲರ ಎದುರು ಬರುವ ಸಾಧ್ಯತೆ ಇದೆ. ಆದರೆ ಹೈಕೋರ್ಟ್ ನೀಡಿರುವ ಸಲಹೆಯಂತೆ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡ್ತಾರಾ..? ಜಾಮೀನು ಸಿಗುತ್ತಾ ಎಂಬುದನ್ನ ನೋಡಬೇಕಿದೆ.


