ಕೇರಳದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ ನಟ ದರ್ಶನ್..?

suddionenews
1 Min Read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿ, ಜಾಮೀನಿನ ಮೇಲೆ ಹೊರ ಬಂದ ಮೇಲೆ ದರ್ಶನ್ ಆಕ್ಡೀವ್ ಆಗಿದ್ದಾರೆ. ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾವನ್ನು ಮತ್ತೆ ಶುರು ಮಾಡಿದ್ದಾರೆ. ಅದರಲ್ಲೂ ಹೆಂಡತಿ, ಮಗನ ಜೊತೆಗೆ ಹೆಚ್ಚು ಸಮಯವನ್ನು ಕಳೆತುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಏಳ್ಗೆಗೆ ಶ್ರಮ ಹಾಕುತ್ತಿದ್ದಾರೆ. ಇದೀಗ ಕುಟುಂಬ ಸಮೇತ ಶಕ್ತಿ ಪೀಠಕ್ಕೆ ಭೇಟಿ ನೀಡಿದ್ದಾರೆ.

ಕೇರಳದ ಕಣ್ಣೂರಿ‌ಲ್ಲಿ ಪ್ತಸಿದ್ಧ ದೇವಾಲಯವೊಂದಿದೆ. ಮಡಾಯಿ ಶ್ರೀ ತಿರುವರ್ಕಾಟ್ಟು ಕಾವು ಭಗವತಿ ದೇವಸ್ಥಾನ. ಇಲ್ಲಿಗೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ತೆರಳುತ್ತಾರೆ. ಈ ದೇವಾಲಯಕ್ಕೂ ನಟ ದರ್ಶನ್ ಕುಟುಂಬ ಸಮೇತವಾಗಿ ತೆರಳಿದ್ದಾರೆ. ಆ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ದೇವಾಸ್ಥಾನ ಖ್ಯಾತಿ ಪಡೆದಿರುವುದೇ ಶತ್ರು ಸಂಹಾರಕ್ಕಾಗಿ. ಹೀಗಾಗಿ ದರ್ಶನ್ ಅವರು ಕೂಡ ಶತ್ರು ಸಂಹಾರ ಪೂಜೆ ಮಾಡಿಸಿದರಾ ಎಂಬ ಅನುಮಾನ ಎಲ್ಲರನ್ನು ಕಾಡಿದೆ. ದರ್ಶನ್ ಅವರ ಬಿಡುಗಡೆಗಾಗಿ ವಿಜಯಲಕ್ಷ್ಮಿ ತಿರುಗಿದ ದೇವಸ್ಥಾನಗಳೇ ಹೆಚ್ಚು. ಅದರಲ್ಲೂ ಶಕ್ತಿ ಪೀಠಗಳ ಮೊರೆ ಹೋಗಿದ್ದರು. ದರ್ಶನ್ ಅವರು ಆದಷ್ಟು ಬೇಗ ಬಿಡುಗಡೆಯಾಗಲಿ ಎಂದೇ ಬೇಡಿಕೊಂಡಿದ್ದರು. ಹರಕೆ ಹೊತ್ತುಕೊಂಡಿದ್ದರು. ಇದೀಗ ದರ್ಶನ್ ಹಾಗೂ ಮಗ ವಿನೀಶ್ ಜೊತೆಗೂಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಇದ್ದಾರೆ. ಇಂದು ಕೇರಳದ ಮಡಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈಗಾಗಲೇ ದರ್ಶನ್ ಅವರಿಂದ ಹಲವರನ್ನು ದೂರ ಇಟ್ಟಿರುವ ವಿಜಯಲಕ್ಷ್ಮಿ, ಯಾರ ಕೆಟ್ಟ ಕಣ್ಣು ಬೀಳದಿರಲೆಂದು ಪೂಜೆ ಮಾಡಿಸಿರಬಹುದು.

Share This Article
Leave a Comment

Leave a Reply

Your email address will not be published. Required fields are marked *