Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

Diabetes Care in Monsoon: ಮಳೆಗಾಲದಲ್ಲಿ ಮಧುಮೇಹ ಇರುವವರು ತುಂಬಾ ಹುಷಾರಾಗಿರಬೇಕು : ಯಾಕೆ ಗೊತ್ತಾ ?

Facebook
Twitter
Telegram
WhatsApp

 

ಸುದ್ದಿಒನ್ : ಮಳೆಗಾಲದಲ್ಲಿ ಮಧುಮೇಹ ಇರುವವರ ಆರೋಗ್ಯ ಸ್ಥಿತಿ ವಿಭಿನ್ನವಾಗಿರುತ್ತದೆ. ಆಗಾಗ ಸಕ್ಕರೆ ಮಟ್ಟ ನಿಯಂತ್ರಣ ತಪ್ಪುವುದು ಸಾಮಾನ್ಯ. ಆದ್ದರಿಂದ ಅವರು ಕೆಲವು ಸಲಹೆಗಳನ್ನು ಪಾಲಿಸುವುದು ಅತ್ಯಗತ್ಯ. ಮಧುಮೇಹ ಇರುವವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ವಿಶೇಷವಾಗಿ ಮಳೆಗಾಲದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರಾಗುತ್ತದೆ. ಆದ್ದರಿಂದ ಇದು ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಿಸಲು, ಮಧುಮೇಹಿಗಳು ಕಾಲಕಾಲಕ್ಕೆ ನಿಯಮಿತ ಸಕ್ಕರೆ ಪರೀಕ್ಷೆಗಳಿಗೆ ಒಳಗಾಗಬೇಕು. ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ವೈದ್ಯರ ಸಲಹೆಯಂತೆ ಔಷಧಗಳನ್ನು ಸೇವಿಸುವುದು ಬಹಳ ಮುಖ್ಯ.

ಮಳೆಗಾಲದಲ್ಲಿಯೂ ಸಹಾ ದೇಹವು ನೀರಿನಂಶವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ನೆನಪಿಡಿ. ಆದ್ದರಿಂದ, ಮಕ್ಕಳು ಮತ್ತು ವಯಸ್ಕರು ಆಗಾಗ್ಗೆ ನೀರನ್ನು ಕುಡಿಯುವುದು ಮತ್ತು ಆರೋಗ್ಯಕರ ಜ್ಯೂಸ್ ಸೇವಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿಯೂ ನೆಲದಿಂದ ಬರುವ ಶಾಖದಿಂದಾಗಿ ವಿಪರೀತ ಬೆವರು ಬರುತ್ತದೆ. ಇದು ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದಷ್ಟೂ ಸಕ್ಕರೆ ಮತ್ತು ಸಿಹಿ ಪಾನೀಯಗಳನ್ನು ಕುಡಿಯಬಾರದು. ಬದಲಿಗೆ, ಹರ್ಬಲ್ ಟೀ, ಎಳನೀರು, ಸ್ವತಃ ಮನೆಯಲ್ಲೇ ಮಾಡಿದ ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಿರಿ.

ಮಾನ್ಸೂನ್ ಸಮಯದಲ್ಲಿ ನಾವು ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರಗಳನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ ಮಧುಮೇಹ ಇರುವವರಿಗೆ ಈ ಆಹಾರ ಸೂಕ್ತವಲ್ಲ. ಆದ್ದರಿಂದ ಸಮತೋಲಿತ ಆಹಾರವನ್ನು ಹೊಂದುವುದು ಬಹಳ ಮುಖ್ಯ. ತಾಜಾ ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಧಾನ್ಯಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಕಡಿಮೆ ಸಿಹಿ ಇರುವ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬೀದಿ ಬದಿಯ ಆಹಾರಗಳು ಮತ್ತು ಅನಾರೋಗ್ಯಕರ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿ. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಆಹಾರದಿಂದ ಹರಡುವ ಸೋಂಕುಗಳಿಂದ ನಮ್ಮನ್ನು ನಾ೬ ರಕ್ಷಿಸಿಕೊಳ್ಳಬಹುದು.

ಮಧುಮೇಹ ಇರುವವರಿಗೆ ತಮ್ಮ ಪಾದಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲು ಸಾಮಾನ್ಯವಾಗಿ ಹೇಳಲಾಗುತ್ತದೆ. ಏಕೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಲ್ಲದಿದ್ದರೆ ಪಾದಗಳ ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ಆದ್ದರಿಂದ ಮಧುಮೇಹ ಇರುವವರು ಸಾಧ್ಯವಾದಷ್ಟು ನೀರಿನಲ್ಲಿ ಹೋಗುವುದನ್ನು ತಪ್ಪಿಸಬೇಕು ಮತ್ತು ತಮ್ಮ ಪಾದಗಳನ್ನು ನೀರಿನಲ್ಲಿ ಆದಷ್ಟೂ ಒದ್ದೆಯಾಗದಂತೆ ಇಟ್ಟುಕೊಳ್ಳಬೇಕು. ಇದಕ್ಕಾಗಿ ಪಾದಗಳಿಗೆ ಒಳ್ಳೆಯ ಚಪ್ಪಲಿ ಅಥವಾ ಬೂಟುಗಳನ್ನು ಧರಿಸಬೇಕು. ಪಾದಗಳ ಚರ್ಮವು ಗಾಯಗೊಳ್ಳದಂತೆ ಮತ್ತು ಪಾದಗಳು ಒಡೆಯದಂತೆ ಎಚ್ಚರವಹಿಸುವುದು ಅನಿವಾರ್ಯ.  ಇದರಿಂದ ಸೋಂಕನ್ನು ಆದಷ್ಟು ತಡೆಯಬಹುದು. ಒಂದು ವೇಳೆ ಪಾದಗಳಿಗೆ ಏನಾದರೂ ತೊಂದರೆ ಅನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಮಧುಮೇಹ ನಿರ್ವಹಣೆಯಲ್ಲಿ ವ್ಯಾಯಾಮ ಬಹಳ ಮುಖ್ಯ ಎಂಬುದನ್ನು ನೆನಪಿಡಿ. ದೇಹವನ್ನು ಅತಿಯಾಗಿ ದಂಡಿಸದೇ ಲಘು ನಡಿಗೆ, ಲಘು ವ್ಯಾಯಾಮ ಹೀಗೆ ದೇಹಕ್ಕೆ ಹೆಚ್ಚು ಪ್ರಯಾಸ ನೀಡದೇ ಮನೆಯಲ್ಲಿಯೇ ಮಾಡಬಹುದಾದ ಆಸನಗಳು ಅಥವಾ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ. ಉತ್ತಮ ಗುಣಮಟ್ಟದ ಚಪ್ಪಲಿ ಅಥವಾ ಬೂಟುಗಳನ್ನು ಧರಿಸಿ.  ಮಳೆಯಲ್ಲಿ ನೆನೆಯಬೇಡಿ,  ನಡೆಯಬೇಡಿ. (ಪಾದಗಳ ಬಗ್ಗೆಯೂ ಎಚ್ಚರವಿರಲಿ). ಡಯಾಬಿಟಿಕ್ ನ್ಯೂರೋಪತಿ ಇರುವವರು ಮಳೆಗಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಏಕೆಂದರೆ ಚಿಕ್ಕ ಗಾಯವಾಗಿ ದೊಡ್ಡದಾಗಿ ನಂತರ ಅದು ನಿಮ್ಮನ್ನು ತುಂಬಾ ಬಾಧಿಸುತ್ತದೆ. ಆದ್ದರಿಂದ ಮಧುಮೇಹ ಸಮಸ್ಯೆಯಿರುವವರು ತುಂಬಾ ಎಚ್ಚರಿಕೆಯಿಂದಿರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!