ಮೈಸೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಾಯಕರು ಜನವರಿ 9 ರಂದು ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಈ ಪಾದಯಾತ್ರೆ ಬಗ್ಗೆ ಬಿಜೆಪಿ ಮತ್ತು ಜೆಡುಎಸ್ ಪಕ್ಷಗಳು ವ್ಯಂಗ್ಯವಾಡುತ್ತಲೆ ಇದೆ. ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವ ನಾರಾಯಣ್ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಉದ್ದೇಶ ಒಳ್ಳೆಯದ್ದಲ್ಲ. ಅವರ ಉದ್ದೇಶ ಜನಪರವಾದುದ್ದಲ್ಲ. ಯಾರು ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ..? ಕುಮಾರಸ್ವಾಮಿ ಅವರಿಗೂ ಗೊತ್ತಿದೆ. 20-20ಯಲ್ಲಿ ಯಾರು ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದು ಅಂತ. ಜೆಡಿಎಸ್ ಹತಾಶೆಯ ಮನೋ ಭಾವನೆಯಿಂದ ಈ ರೀತಿ ಮಾತನಾಡುತ್ತಿದೆ.
ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅವರನ್ನು ಹತಾಶರನ್ನಾಗಿಸಿದೆ. ಸೋಲು ನಿರಾಶೆಯಿಂದ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿಲ್ಲ. ಜನಪರ ಉದ್ದೇಶ ಅವರಿಗಿಲ್ಲ ಎಂದಿದ್ದಾರೆ.