ಧ್ರುವ ಸರ್ಜಾ, ಧ್ರುವ ಸರ್ಜಾ ಫ್ಯಾನ್ಸ್ ಬಳಿ ಕ್ಷಮೆ ಕೇಳುತ್ತೇನೆ : ಪೊಲೀಸ್ ಠಾಣೆಯಿಂದ ಬಂದ ಸುಧಾಕರ್ ಹೊಸ ವಿಡಿಯೋ ಪೋಸ್ಟ್

suddionenews
1 Min Read

 

ಬೆಂಗಳೂರು: ಮಾರ್ಟಿನ್ ಸಿನಿಮಾ ರಿಲೀಸ್ ಆದಾಗಿನಿಂದ ಯೂಟ್ಯೂಬರ್ ಸುಧಾಕರ್ ಹಾಗೂ ಧ್ರುವ ಸರ್ಜಾ ಫ್ಯಾನ್ಸ್ ನಡುವಿನ ಸುದ್ದಿಯೇ ಜೋರಾಗಿದೆ. ಸುಧಾಕರ್ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಮಾಡಿ ಹಾಕಿದ್ದಕ್ಕೆ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿತ್ತು. ಆದರೆ ಆ ಬಳಿಕ ಸುಧಾಕರ್ ಸವಾಲು ಕೂಡ ಹಾಕಿದ್ದರು. ಇಷ್ಟೆಲ್ಲಾ ಸೋಷಿಯಲ್ ಮೀಡಿಯ ಗಲಭೆ ನಡುವೆ, ಯಾವುದೋ ಪ್ರಕರಣದಲ್ಲಿ ಸುಧಾಕರ್ ಕೂಡ ಭಾಗಿಯಾಗಿದ್ದರು ಎಂದು ಮಾದನಾಯಕನಹಳ್ಳಿ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು.

ಪೊಲೀಸ್ ಸ್ಟೇಷನ್ ಗೆ ಕರೆಸಿದ್ದ ಪೊಲೀಸರು ಬುದ್ದಿ ಮಾತು ಹೇಳಿ, ವಿಡಿಯೋಗಳನ್ನು ಡಿಲೀಟ್ ಮಾಡಿ ಕಳುಹಿಸಿದ್ದರು. ಇದೀಗ ಹೊಸದೊಂದು ವಿಡಿಯೋ ಮಾಡಿ ಸುಧಾಕರ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕಷ್ಟಕಾಲದಲ್ಲಿ ನಿಂತವರಿಗೆ, ದಾನಪುರ ಹೋಬಳಿಯ ಹಿರಿಯರು, ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಆ ವಿಡಿಯೋದಲ್ಲಿ ಹೀಗಿದೆ.

‘ಗೊತ್ತೋ ಗೊತ್ತಿಲ್ಲದೆಯೋ ನಾನು ಒಂದು ರಿವ್ಯೂ ಕೊಟ್ಟಿದೆ. ಬೇರೆ ಯಾರ ಅಭಿಮಾನಿಯಾಗಿಯೂ ಈ ವಿಮರ್ಶೆ ಮಾಡಿಲ್ಲ. ಧ್ರುವ ಸರ್ಜಾ ಅವರ ಬಹದ್ದೂರ್ ಸಿನಿಮಾ ನನಗೆ ತುಂಬಾ ಇಷ್ಟ. ಅದ್ದೂರಿ ಸಿನಿಮಾದ ಡೈಲಾಗ್ ಗಳು ನನಗೆ ಈಗಲೂ ನೆನಪಿದೆ. ಈಗ ಧ್ರುವ ಸರ್ಜಾ ಅವರ ಕಟೌಟ್ ಗೆ ಅಂತಹ ಸಿನಿಮಾಗಳು ಬರ್ತಿಲ್ಲ ಅನ್ನೋ ಬೇಸರದಲ್ಲಿ ಹೇಳಿದ್ದೆ. ಕೆಟ್ಟ ಉದ್ದೇಶದಿಂದ ನಾನು ಹೇಳಿರಲಿಲದಲ. ಇದಾದ ಮೇಲೆ ಒಂದಯ ಗಂಟೆಯಲ್ಲಿಯೇ ಆ ವಿಡಿಯೋ ಡಿಲೀಟ್ ಮಾಡಿದ್ದೆ. ಕೆಲವರು ಬುದ್ದಿವಾದ ಹೇಳಿದ್ದರು. ಆದರೂ ಬೆದರಿಕೆ ಕರೆಗಳು ಬಂದಾಗ ನಾನು ಎರಡನೇ ವಿಡಿಯೋ ಮಾಡಿದೆ. ನನ್ನ ಕಡೆಯಿಂದ ತಪ್ಪಾಗಿದೆ. ಧ್ರುವ ಸರ್ಜಾ, ಧ್ರುವ ಸರ್ಜಾ ಫ್ಯಾನ್ಸ್ ಹಾಗೂ ಕರ್ನಾಟಕದ ಜನತೆಗೆ ನಾನು ಕ್ಷಮೆ ಕೇಳುತ್ತೇನೆ. ಧ್ರುವ ಸರ್ಜಾ ಅವರು ದೊಡ್ಡವರು. ಅವರ ಮುಂದೆ ನಾನು ಏನು ಅಲ್ಲ. ಇಷ್ಟರ ಮೇಲೆ ನಾನು ಏನು ಮಾತನಾಡುವುದಿಲ್ಲ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *