ಇನ್ನೇನು ಐಪಿಎಲ್ ಶುರುವಾಗೋದಕ್ಕೆ ಸಮಯ ಹತ್ತಿರ ಬಂದಿದೆ. ಮಾರ್ಚ್ 27 ರಿಂದ ಐಪಿಎಲ್ ಹಬ್ಬ ಆರಂಭವಾಗಲಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ ನಾಯಕ ಐಪಿಎಲ್ ಗೆ ಗುಡ್ ಬೈ ಹೇಳ್ತಾರೆ ಅನ್ನೋ ವಿಚಾರ ಹಬ್ಬುತ್ತಿದೆ.
ಈ ಸಂಬಂಧ ಚೆನ್ನೈ ಸೂಪರ್ ಕಿಂಗ್ ಪ್ರಾಂಚೈಸಿ ಈ ಬಗ್ಗೆ ಮಾತನಾಡಿದ್ದು, ಎಂ ಎಸ್ ಧೋನಿ ಸದ್ಯ ಗುಡ್ ಬೈ ಹೇಳಲ್ಲ. ಧೋನಿ ನಿವೃತ್ತಿ ಪಡೆಯೋದು ಬಿಡೋದು ಅವರಿಗೆ ಬಿಟ್ಟಿದ್ದು. ಧೋನಿ ಒಂದಷ್ಟು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ ನಲ್ಲೇ ಆಡಲಿದ್ದಾರೆ.
ಈಗ್ಲೇ ತಮ್ಮ ನಿವೃತ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಸದ್ಯ ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೇವಲ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಈಗ ಐಪಿಎಲ್ ನಿಂದಲೂ ನಿವೃತ್ತಿ ಪಡೆಯುತ್ತಿದ್ದಾರೆಂಬ ಗಾಳಿ ಸುದ್ದಿ ಕೇಳಿ ಬರ್ತಿದೆ. ಆದ್ರೆ ಈ ಬಗ್ಗೆ ಧೋನಿ ಅವರು ಯಾವುದೇ ಮಾಹಿತಿ ನೀಡಿಲ್ಲ.