ಮೈಸೂರು: ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ಶುರು ಮಾಡಿದೆ. ಅನಾಮಧೇಯ ವ್ಯಕ್ತಿಯ ವಿಚಾರಣೆಯನ್ನು ನಡೆಸುತ್ತಿದೆ. ಇದರ ನಡುವೆ ಇಕ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದು, ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರವಿದೆ. ಇಲ್ಲಿ ಯಾರಿಗೂ ಕಾಣದ ಕೈವೊಂದು ಕೆಲಸ ಮಾಡ್ತಿದೆ. ಪ್ರಕರಣ ಜಟಿಲವಾಗ್ತಿದೆ, ಹಲವರು ಜಟಿಲ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಮಾಡ್ತಾ ಇರೋದು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ ಕೇಸ್ ಬ್ಯಾಗ್ರೌಂಡ್ ಹಿಂದೆ ಇರೋದು ಕೇರಳಸರ್ಕಾರ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ..? ಪ್ರಕರಣವನ್ನು ಎಸ್ಐಟಿಗೆ ವರ್ಗಾವಣೆ ಮಾಡಿದ್ದಾರೆ. ಅದನ್ನ ನಾವೂ ಸ್ವಾಗತಿಸ್ತೇವೆ, ಧರ್ಮಸ್ಥಳದವರು ಸ್ವಾಗತಿಸಿದ್ದಾರೆ. ಈ ಪ್ರಗತಿಪರರ ಗ್ಯಾಂಗ್ ನಾಳೆ ಎಸ್ಐಟಿಯನ್ನು ಒಪ್ಪುವುದಿಲ್ಲ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ.
ಅವರ ಪರವಾಗಿ ರಿಪೋರ್ಟ್ ಕೊಟ್ಟರೆ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ. ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ, ಬುರುಡೆ ಬಿಡ್ತಾನೋ ಕಾದು ನೋಡೋಣಾ. ಈ ಧರ್ಮಸ್ಥಳದ ಸುದ್ದಿ ಅಲ್ಲಜ್ಮೀರಾ ಕೇರಳದಲ್ಲಿ ಚರ್ಚೆ ಆಗ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರ ಬರಲಿದೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ವಿಪಕ್ಷ ಆರ್ ಅಶೋಕ್ ಅವರು ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಕಾರಣ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಲಾಗಿದ್ದು, ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಬಳಿಕ ತಿಳಿಯಲಿದೆ.

