ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಗಳನ್ನು ಹೂತಾಕಿದ್ದೀನಿ ಅಂತ ಹೇಳಿದ್ದ ಅನಾಮಧೇಯ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಆತ ತೋರಿಸಿದ ಸ್ಥಳವನ್ನೆಲ್ಲಾ ಪರಿಶೀಲನೆ ಮಾಡ್ತಾ ಇದ್ದಾರೆ. ಈಗಾಗಲೇ ಆತ ತೋರಿಸಿದ ಐದು ಸ್ಥಳಗಳಲ್ಲೂ ಅಗೆದು ಪರಿಶೀಲನೆ ನಡೆಸಿದ್ದಾರೆ. ಹದಿಮೂರು ಸ್ಥಳಗಳ ಪೈಕಿ ಐದು ಕಡೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ ಎನ್ನಲಾಗಿದೆ. ಇಂದು ಕೂಡ ಉತ್ಖನನ ಮುಂದುವರೆಯಲಿದೆ.
ಧಾರಾಕಾರ ಮಳೆಯ ನಡುವೆಯು ಮಾಸ್ಕ್ ಹಾಕಿದ ವ್ಯಕ್ತಿಯ ಜೊತೆಗೆ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಎಸ್ಐಟಿ ಕಚೇರಿ ಸ್ಥಾಪಿಸಿದ್ದಾರೆ. ಜೊತೆಗೆ ಹೆಲ್ಪ್ ಲೈನ್ ಕೂಡ ಶುರು ಮಾಡಿದೆ. ಎಸ್ಐಟಿ ಸಂಪರ್ಕಕ್ಕಾಗಿ ಫೋನ್ ನಂಬರ್ ಕೂಡ ನೀಡಲಾಗಿದೆ. ಆ ನಂಬರ್ ಈ ರೀತಿ ಇದೆ. 0824-2005301 ಹಾಗೇ ವಾಟ್ಸಾಪ್ ನಂಬರ್ 8277986369 ನಂಬರ್ ಗೆ ವಾಟ್ಸಾಪ್ ಕೂಡ ಮಾಡಬಹುದಾಗಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ಒಳಗೆ ಈ ನಂಬರ್ ಗಳಿಗೆ ಸಂಪರ್ಕ ಮಾಡಿ, ತಮಗೆ ಗೊತ್ತಿರುವ ಮಾಹಿತಿಯನ್ನು ನೀಡಲು ಮನವಿ ಮಾಡಲಾಗಿದೆ. ಎಸ್ಐಟಿ ಅಧಿಕಾರಿಗಳು ಈ ಸಂಬಂಧ ಅಧಿಕೃತವಾಗಿ ಮಾಹಿತಿ ನೀಡಿದೆ.
ಈ ವಿಚಾರವಾಗಿ ದಿನೇಶ್ ಗುಂಡೂರಾವ್ ಮಾತನಾಡಿ, ತನಿಖೆಯಿಂದ ಎಲ್ಲಾ ನಿಜಾಂಶವೂ ತಿಳಿಯಲಿದೆ. ಇಂದು ನಡೆಯುವ ಕಾರ್ಯಾಚರಣೆಯಲ್ಲಿ ಮತ್ತಷ್ಟು ಮಾನವ ಶ್ರಮವನ್ನು ಬಳಸಿ ಸಮಾಧಿ ಇದೆ ಎನ್ನಲಾದಜಾಗವನ್ನು ಅಗೆಯುವ ಸಾಧ್ಯತೆ ಇದೆ. 13 ಸ್ಥಳಗಳು ಮುಂದಿನ ಎರಡು ದಿನಗಳ ಒಳಗೆ ಕಂಪ್ಲೀಟ್ ಆಗಲಿದ್ದು, ಮುಂದಿನ ತನಿಖೆ ಹೇಗಿರಲಿದೆ ಎಂಬ ಕುತೂಹಲ ಇದೆ ಎಂದಿದ್ದಾರೆ.
