ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ. ಈಗಾಗಲೇ ಅಸ್ಥಿಪಂಜರಗಳು, ಮೂಳೆಗಳು ಕೂಡ ಸಿಕ್ಕಿವೆ. ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಿರುವ ಎಸ್ಐಟಿ ತನಿಖೆಯನ್ನು ಅಷ್ಟೇ ಗಂಭೀರವಾಗಿ ಮಾಡ್ತಿದೆ. ಇದೀಗ ಸರ್ಕಾರ ಅಲ್ಲಿರುವ ಎಸ್ಐಟಿಯನ್ನ ಪೊಲೀಸ್ ಠಾಣೆ ಎಂದು ಘೋಷಣೆ ಮಾಡಿದೆ.
ಎಸ್ಐಟಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 2(1)(ಯು) ಅಡಿಯಲ್ಲಿ ನೀಡಿರಯವ ಅಧಿಕಾರವನ್ನು ಚಲಾಯಿಸಿದ ಸರ್ಕಾರದ ಆದೇಶದಂತೆ 2025 ಜುಲೈ 19 ರಂದು ರಚನೆ ಮಾಡಲಾದ ಎಸ್ಐಟಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಲಾಗಿದೆ. ಈ ಮೂಲಕ ಎಸ್ಐಟಿಗೆ ನೇಮಕ ಮಾಡಲಾದ ಪೊಲೀಸ್ ನಿರೀಕ್ಷಕರ ದರ್ಜೆಯ ಅಧಿಕಾರಿಯನ್ನು ಬಿಎನ್ಎಸ್ಎಸ್ ಅಡಿಯಲ್ಲಿ ಠಾಣಾ ಅಧಿಕಾರಿ ಎಂದು ಘೋಷಣೆ ಮಾಡಲಾಗಿದೆ. ಎಸ್ಐಟಿ ಬಿಎನ್ಎಸ್ಎಸ್ ಅಡಿ ತನಿಖಾ ಕ್ರಮಗಳನ್ನು ಅನುಸರಿಸಿ ರಚಿಸಿರುವ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡುವಂತಹ ಅಧಿಕಾರವನ್ನು ಅಧಿಕಾರವನ್ನು ಸರ್ಕಾರ ನೀಡಿದೆ.
ಸದ್ಯ ಎಸ್ಐಟಿ ತಂಡ ಅನಾಮಧೇಯ ವ್ಯಕ್ತಿ ತೋರಿಸಿರುವ ಜಾಗಗಳನ್ನೆಲ್ಲ ಗುರುತು ಮಾಡಿಕೊಂಡು ಅಗೆಸುವ ಕೆಲಸ ಮಾಡುತ್ತಿದೆ. ಅಲ್ಲಿ ಸಿಗುವಂತ ಸಣ್ಣ ಪುಟ್ಟ ವಸ್ತುಗಳನ್ನು ಸಹ ಸಂಗ್ರಹಿಸಿಡುತ್ತಿದೆ. ಜಿತೆಗೆ ಪ್ರಯೋಗಾಲಯಕ್ಕೂ ಕಳುಹಿಸಿಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಆ ಮೂಳೆಗಳ ತನಿಖೆ ನಡೆಯಲಿದೆ. ಸದ್ಯ ಅನಾಮಧೇಯ ವ್ಯಕ್ತಿ ಕೂಡ ಒಂದೊಂದೆ ಸ್ಥಳವನ್ನು ಹೊಸದಾಗಿ ಗುರುತಿಸುತ್ತಾ ಇದ್ದಾರೆ. ಹೀಗಾಗಿ ಎಲ್ಲಾ ಕಡೆಯಲ್ಲೂ ಶೋಧ ಕಾರ್ಯ ಮಾಡುತ್ತಿದ್ದಾರೆ.
