ಬೆಂಗಳೂರು: ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನನ್ನು ಎಸ್ಐಟಿ ಮುಖ್ಯಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಶ್ನೆಗಳ ಸುರಿಮಳೆಯನ್ನ ಸುರಿಸಿದ್ದು, ಶವ ಹೂತು ಹಾಕಿದ್ದ ವೇಳೆ ನಿನ್ನ ಜೊತೆ ಇದ್ದವರು ಯಾರು..? ತಲೆ ಬುರುಡೆ ತಂದದ್ದು ಎಲ್ಲಿಂದ, ಆಗ ನಿನ್ನ ಜೊತೆಗೆ ಯಾರಿದ್ರು..? ಎಂಬೆಲ್ಲಾ ಪ್ರಶ್ನೆಗಳನ್ನ ಕೇಳಿದ್ದಾರೆ.
ತಲೆ ಬುರುಡೆ ಯಾರದ್ದು ಅನ್ನೋ ಖಚಿತತೆ ನಿಮಗೆ ಇದ್ಯಾ..? ಹೂತು ಹಾಕಿದ್ದ ಮೃತದೇಹಗಳ ಪೈಕಿ ಪರಿಚಿತ ವ್ಯಕ್ತಿಗಳದ್ದಿತ್ತಾ.? ಮೃತದೇಹ ಹೂತು ಹಾಕಲು ಒತ್ತಡ ಹಾಕಿದ ಮೇಲ್ವಿಚಾರಕರ ಹೆಸರೇನು..? ಎಸ್ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ. ಅಷ್ಟೇ ಅಲ್ಲ 2014ರಲ್ಲಿ ದೂರುದಾರನ ಕುಟುಂಬದ ಬಾಲಕಿಗೆ ಕಿರುಕುಳ ನೀಡಿದ್ದರ ಬಗ್ಗೆಯು ಪ್ರಶ್ನೆಗಳನ್ನ ಕೇಳಲಾಗಿದೆ.
ಮೇಲ್ವಿಚಾರಕ ರ ಸಂಪರ್ಕದಲ್ಲಿದ್ದ ವ್ಯಕ್ತಿಯಿಂದ ಕಿರುಕುಳ ನೀಡಿದ್ದ ಎಂದಿದ್ದರು ದೂರುದಾರ. 2014ರ ಡಿಸೆಂಬರ್ ನಲ್ಲಿ ಧರ್ಮಸ್ಥಳದಿಂದ ಓಡಿ ಹೋದರ ಎಂದಿದ್ದ. ನನಗೆ ಜೀವ ಭಯ ಇತ್ತು. ಮತ್ತೆ ನನ್ನ ಜೀವ ಉಳಿಸಿಕೊಳ್ಳುವುದಕ್ಕೆ ನಾನು ಓಡಿ ಹೋದೆ ಎಂದಿದ್ದ. ಈ ಸಂಬಂಧ ಎಸ್ಐಟಿ ಟೀಂ ಸಾಲು ಸಾಲು ಪ್ರಶ್ನೆಗಳನ್ನ ಕೇಳಿದೆ. ಆರಂಭದಿಂದ ಇಲ್ಲಿಯವರೆಗೂ ಏನೆಲ್ಲ ಬೆಳವಣಿಗೆ ನಡೆದಿದೆ ಎಂಬುದರ ಬಗ್ಗೆ ವಿಚಾರಣೆ ನಡೆದಿದೆ.
ಲೈಂಗಿಕ ಸಂಪರ್ಕ ನೀಡಿದವ ನಿಮ್ಮ ಕುಟುಂಬದ ಸಂಪರ್ಕದಲ್ಲಿದ್ರಾ..? ಆಗ ಪೊಲೀಸರನ್ನ ನೀವೂ ಯಾಕೆ ಸಂಪರ್ಕಿಸಲಿಲ್ಲ. ಘಟನೆ ಬಳಿಕ ಯಾವ ರಾಜ್ಯಕ್ಕೆ ಹೋಗಿ ತಲೆಮರೆಸಿಕೊಂಡಿದ್ದೀರಿ. ನಿಮ್ಮನ್ನು ಯಾರಾದ್ರೂ ಹುಡುಕಾಡಿದ್ರಾ..? ಎಂಬ ನಾನಾ ಪ್ರಶ್ನೆಗಳನ್ನ ಎಸ್ಐಟಿ ಅಧಿಕಾರಿಗಳು ಈ ದೂರುದಾರನಿಗೆ ಕೇಳ್ತಾ ಇದ್ದಾರೆ.
