ಧರ್ಮಸ್ಥಳ: ಬುರುಡೆ ಕೇಸ್ ದಾಖಲಾದಾಗಿನಿಂದಲೂ ಧರ್ಮಸ್ಥಳದ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಧರ್ಮಸ್ಥಳದಲ್ಲಿ ಮತ್ತೆ ಬುರುಡೆ, ಅಸ್ಥಿಪಂಜರಗಳು ಪತ್ತೆಯಾಗಿವೆ. ಬಂಗ್ಲೆಗುಡ್ಡದಲ್ಲಿ ಏಳು ಅಸ್ಥಿಪಂಜರಗಳು ಪತ್ತೆಯಾಗಿವೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಯುಡಿಆರ್ ಪ್ರಕರಣ ದಾಖಲು ಮಾಡಲು ಚಿಂತನೆ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಬುರುಡೆ, ಅಸ್ಥಿಪಂಜರ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವುಗಳ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪತ್ತೆ ಆಗಿರುವ ಅಸ್ಥಿಪಂಜರಗಳು ಯಾರದ್ದು, ಇಲ್ಲಿಗೆ ಬಂದು ಯಾಕೆ ಜೀವ ಕಳೆದುಕೊಂಡರು ಎಂಬುದೆಲ್ಲವನ್ನು ಎಸ್ಐಟಿ ಅಧಿಕಾರಿಗಳು ಕಂಎಉಕೊಳ್ಳಲು ತನಿಖೆ ನಡೆಸಲಿದ್ದಾರೆ. ಈಗಾಗಲೇ ಒಂದು ಅಸ್ಥಿಪಂಜರದ ಕುರುಹು ಸಿಕ್ಕಿದ್ದು ಅದು. ಕೊಡಗು ಮೂಲದ ಯುಬಿ ಅಯ್ಯಪಗಪರದ್ದು ಎಂದು ಬಹುತೇಕ ಖಚಿತವಾಗಿದೆ. ಇನ್ನುಳಿದ ಆರು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್ಐಟಿ ಜಾಡಯ ಹಿಡಿದಿದ್ದು, ಪ್ರಯೋಗಾಲಯಕ್ಕೆ ಡಿಎನ್ಎ ಟೆಸ್ಟ್ಗೆ ಕಳುಹಿಸಲು ತಯಾರಿ ಮಾಡಿಕೊಂಡಿದೆ. ದೂರು ನೀಡಿದ ಬಳಿಕ ಮತ್ತೆ ಯಾವ ರೀತಿಯ ವಿಚಾರಣೆ ನಡೆಯುತ್ತದೆ ಎಂಬ ಕುತೂಹಲವಿದೆ.
ಸದ್ಯ ಚಿನ್ನಯ್ಯ ಎಸ್ಐಟಿ ವಶದಲ್ಲಿದ್ದಾರೆ. ಚಿನ್ನಯ್ಯ ಈ ಮೊದಲು ಬಂಗ್ಲರ ಗುಡ್ಡ ಸೇರಿದಂತೆ ಹಲವು ಕಡೆ ಜಾಗ ತೋರಿಸಿದ್ದ. ಆದರೆ ಆತ ತೋರಿಸಿದ ಎಷ್ಟೋ ಜಾಗದಲ್ಲಿ ಯಾವುದೇ ಹೆಚ್ಚು ಮೂಳೆಗಳು ಸಿಕ್ಕಿರಲಿಲ್ಲ. ಬಳಿಕ ಆತನನ್ನು ಅರೆಸ್ಟ್ ಮಾಡಿ ತನಿಖೆ ಮಾಡುತ್ತಿದ್ದಾರೆ. ಈಗ ಬೇರೊಬ್ಬ ವ್ಯಕ್ತಿ ಬಂದು ಬಂಗ್ಲೆ ಗುಡ್ಡದಲ್ಲಿ ಹೆಣಗಳನ್ನ ಹೂತಾಕಿದ್ದೀನಿ ಅಂತ ಹೇಳಿದ್ದ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ತನಿಖೆ ನಡೆಸುತ್ತಿದೆ. ಈಗಾಗಲೇ ಅಲ್ಲಿಯೇ ಏಳು ಅಸ್ಥಿಪಂಜರಗಳು ಹಾಗೂ ಬುರುಡೆ ಸಿಕ್ಕಿವೆ.
