ಧರ್ಮಸ್ಥಳ ಬಿಜೆಪಿ ಸಮಾವೇಶ : ದರ್ಗಾದ ಬಗ್ಗೆ ಜೋಶಿ ಸವಾಲು

1 Min Read

ದಕ್ಷಿಣ ಕನ್ನಡ: ಇಂದು ಧರ್ಮಸ್ಥಳದಲ್ಲಿ ಧರ್ಮರಕ್ಷಣೆಯ ಸಮಾವೇಶವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಈ ಬೃಹತ್ ಸಮಾವೇಶವನ್ನು ಬಿವೈ ವಿಜಯೇಂದ್ರ ಅವರು ನೇತೃತ್ವ ವಹಿಸಿಕೊಂಡಿದ್ದಾರೆ. ಬಿಜೆಪಿ ನಾಯಕರೆಲ್ಲಾ ಸದ್ಯ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ‌ ಕೇಂದ್ರ ಸಚುವ ಪ್ರಹ್ಲಾದ್ ಜೋಶಿ ಅವರು ಸವಾಲೊಂದನ್ನ ಹಾಕಿದ್ದಾರೆ. ಬುರುಡೆ ಸರ್ಕಾರ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೆ ಭಾಷಣ ಆರಂಭಿಸಿದ್ದಾರೆ.

ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಶನಿ ಸಿಂಗಾಪುರ್, ಶಬರಿಮಲೆ, ಈಗ ಧರ್ಮಸ್ಥಳ. ಎಸ್ಐಟಿ ಮಾಡಿದರು, ಆದರೆ ಬುರುಡೆ ತಂದವನ ವಿರುದ್ಧ ಕ್ರಮ ಆಗಿಲ್ಲ. ಬಾಹುಬಲಿ ಬೆಟ್ಟುಬಿಟ್ಟು ಎಲ್ಲಾ ಕಡೆ ಅಗೆದರು. ಬೇರೆ ಕಡೆ ಅಗೆಯಿರಿ ನೋಡೋಣಾ. ದರ್ಗಾದಲ್ಲಿ ಇದೆ ಅಂತ ಆರೋಪ ಮಾಡ್ತೀನಿ, ಅಗೀರಿ ನೋಡೋಣಾ ಎಂದು ಜೋಶಿ ಅವರು ಸವಾಲು ಹಾಕಿದ್ದಾರೆ.

ನಮ್ಮ ಧಾರ್ಮಿಕ ಮುಖಂಡರ ಮೇಲೆ ಆರೋಪ ಮಾಡಿದ್ರೆ ಅಲುಗಾಡುತ್ತೆ ಎಂದು ಯೋಚನೆ ಮಾಡಿದ್ದಾರೆ. ಕಾಂಗ್ರೆಸ್ ನವರು ಒಂದು ವರ್ಗದ ಪರವಾಗಿ ನಿಂತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೆ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಮಂಜುನಾಥನಿಗೆ ಅಲಮಾನ ಮಾಡುವ ಕಾಂಗ್ರೆಸ್ ಗೆ ಪಾಠ ಕಲಿಸಬೇಕು. ಬುರುಡೆ ಪ್ರಕರಣದಲ್ಲಿ ಎಸ್ಐಟಿ ರಚನೆಯನ್ನು ಸ್ವಾಗತಿಸಿದೆವು. ಆದರೆ ಅಪಪ್ರಚಾರ ತಡೆಯುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಹಿಂದೂ ಕಾರ್ಯಕರ್ತರನ್ನು ತಕ್ಷಣ ಅರೆಸ್ಟ್ ಮಾಡುತ್ತಾರೆ. ಬುರುಡೆ ಪ್ರಕರಣದಲ್ಲಿ ಬೀದಿಯಲ್ಲಿ ಹೋಗುವ ಅಯೋಗ್ಯನ ದೂರಿನ ಪ್ರಾಥಮಿಕ ತನಿಖೆಯನ್ನೂ ಮಾಡಲ್ಲ. ಸೌಜನ್ಯ ಕೇಸ್ ತನಿಖೆಯಾಗಲಿ. ಬಿಜೆಪಿಯ ಸಂಪೂರ್ಣ ಸಹಕಾರವಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *