ದಕ್ಷಿಣ ಕನ್ನಡ: ಧರ್ಮಸ್ಥಳ ಶವ ಹೂತು ಹಾಕಿದ್ದ ಕೇಸ್ ಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ಅನಾಮಧೇಯ ವ್ಯಕ್ತಿ ಇಂದು ಹೊಸ ಜಾಗವೊಂದನ್ನ ತೋರಿಸಿದ್ದು, ಅದನ್ನು ಮಾರ್ಕ್ ಮಾಡಲಾಗಿದ್ದು, ಹುಡುಕಾಟ ಶುರುವಾಗಿದೆ. ಅದು ಗೋಂಕ್ರಾಥಾರ್ ಕಾಡಿನ ಪ್ರದೇಶದಂತೆ ಇದೆ. ಆ ಜಾಗಕ್ಕೆ 15 ಪಾಯಿಂಟ್ ಹಾಕಲಾಗಿದೆ. ಅನಾಮಧೇಯ ವ್ಯಕ್ತಿ ಗೋಂಕ್ರಾಥಾರ್ ಪ್ರದೇಶವನ್ನು ಗುರುತಿಸಿದ್ದು, ಎಸ್ಐಟಿ ಅಧಿಕಾರಿಗಳು ಆ ಸ್ಥಳಕ್ಕೆ ತೆರಳಿದ್ದಾರೆ. ಕಲ್ಲೇರಿ ಪಕ್ಕದಲ್ಲಿಯೇ ಇರುವ ಬೊಳಿಯಾರ್ ಗ್ರಾಮದ ಗೋಂಕ್ರಾಂಥಾರ್ ಆಗಿದೆ.
ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್, ತನಿಖಾಧಿಕಾರಿ ದಯಾಮ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ. ಈ 15ನೇ ಪಾಯಿಂಟ್ ಇರೋದು ಕೊಲೆಯಾದ ಪದ್ಮಲತಾ ಮನೆಯ ಬಳಿ. ಕಳೆದ 20 ವರ್ಷಗಳ ಹಿಂದೆ ಶವಗಳನ್ನ ಹೂತು ಹಾಕಿದ್ದೆ ಎಂದು ಹೇಳಿದ್ದರು. ಅದರಂತೆ ಅವರ ಜೊತೆವೆ ಎಸ್ಐಟಿ ಅಧಿಕಾರವನ್ನ ತಂಡ ಕೂಡ ಜೊತೆಗಿದ್ದು, ಆತ ಹೇಳಿದ ಜಾಗದಲ್ಲೆಲ್ಲಾ ಹುಡುಕಾಟ ನಡೆಸುತ್ತಿದ್ದಾರೆ.
ಈಗಾಗಲೇ ಹಲವು ಕಡೆ ಅಸ್ಥಿಪಂಜರ, ಮೂಳೆಗಳು ಸಿಕ್ಕಿವೆ. ಪ್ರಯೋಗಾಲಯಕ್ಕೂ ಆ ಮೂಳೆಗಳನ್ನ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಬಹುದು. ಕೆಲವೊಂದು ಕಡೆ ಹೆಣ್ಣು ಅಸ್ಥಿ ಪಂಜರ, ಇನ್ನು ಕೆಲವೊಂದು ಕಡೆ ಮೂಳೆಗಳು ಸಿಕ್ಕಿವೆ. ಈಗ ಅನಾಮಧೇಯ ವ್ಯಕ್ತಿ ಹೊಸ ಜಾಗವನ್ನು ಗುರುತಿಸಿದ್ದಾರೆ. ಅಧಿಕಾರಿಗಳು ಕೂಡ ಗಂಭೀರವಾಗಿ ಈ ಪ್ರಕರಣವನ್ನ ತೆಗೆದುಕೊಂಡಿದ್ದು, ಎಲ್ಲಾ ಆಯಾಮದಿಂದಾನು ತನಿಖೆನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿರುವ ಸಾರ್ವಜನಿಕರಿಗೆ ಒಂದಷ್ಟು ಪ್ರಶ್ನೆಗಳು ಕಾಡುತ್ತಿವೆ. ಆ ಅಸ್ಥಿಪಂಜರಗಳ ವರದಿಯಲ್ಲಜ ಏನು ಬರಬಹುದು ಎಂದು.






