ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಕ್ರಿಕೆಟ್ ಲೋಕದಲ್ಲಿ ಚರ್ಚಿತ ವಿಚಾರವಾಗಿದೆ. ಇಬ್ಬರ ನಡುವೆ ಸಂಬಂಧ ಸರಿ ಇಲ್ಲ ಎಂಬುದಕ್ಕೆ ಕೆಲವೊಂದು ಉದಾಹರಣೆಗಳು ಕಾಣ ಸಿಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿಕೊಂಡಿರುವುದಲ್ಲದೆ, ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇಬ್ಬರು ನಾನೊಂದು ತೀರಾ ನೀನೊಂದು ತೀರಾ ಎಂಬಂತೆ ದೂರ ದೂರ ಆಗ್ತಾ ಇದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಚಹಾಲ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ವಿಚ್ಛೇದನದ ವದಂತಿಯ ನಡುವೆ ಚಹಾಲ್, ಬೇರೆ ಹುಡುಗಿಯ ಜೊತೆಗೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಚಹಾಲ್ ಜೊತೆಗಿದ್ದ ಹುಡುಗಿ ಯಾರೆಂಬುದು ತಿಳಿದಿಲ್ಲ. ಇಬ್ಬರು ಒಂದೇ ಕಾರಿನಿಂದ ಇಳಿದಿದ್ದು, ಕ್ಯಾಮರಾಗಳು ಚಹಾಲ್ ಅವರನ್ನು ಫೋಕಸ್ ಮಾಡುವುದಕ್ಕೆ ಯತ್ನಿಸಿದಾಗ ಮುಖ ಮುಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಹಾಲ್ ಮತ್ತು ಧನಶ್ರೀ 2020ರಲ್ಲಿ ದಾಂಪತ್ಯ ಬದುಕಿಗೆ ಮುನ್ನುಡಿ ಬರೆದಿದ್ದರು. ಆದರೆ ನಾಲ್ಕೇ ವರ್ಷಕ್ಕೆ ಇಬ್ಬರ ದಾಂಪತ್ಯ ಜೀವನ ಮುರಿದು ಬಿದ್ದಿದೆ. 2023ರಲ್ಲಿಯೇ ಧನಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೆಸರಿನ ಜೊತೆಗಿದ್ದ ಚಹಾಲ್ ಹೆಸರನ್ನು ತೆಗೆದು ಹಾಕಿದ್ದರು. ಅಂದಿನಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಚಹಾಲ್ ಆಗಲಿ, ಧನಶ್ರೀ ಆಗಲಿ ತಮ್ಮಿಬ್ಬರ ನಡುವಿನ ಡಿವೋರ್ಸ್ ಸುದ್ದಿ ಬಗ್ಗೆ ಮಾತನಾಡಿಲ್ಲ. ಆಪ್ತ ಮೂಲಗಳಿಂದ, ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದು, ಸದ್ಯದಲ್ಲಿಯೇ ಡಿವೋರ್ಸ್ ಸುದ್ದಿ ಘೋಷಿಸಲಿದ್ದಾರೆ ಎನ್ನುತ್ತಿದ್ದಾರೆ.