ವಿಜ್ಞಾನದಿಂದ ಮಕ್ಕಳ ಮನಸ್ಸು ವಿಕಾಸ : ಎಚ್.ಎಸ್.ಟಿ.ಸ್ವಾಮಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28 : ವಿಜ್ಞಾನದಿಂದ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸುವ ಮೂಲಕ ಅವರ ಮನಸ್ಸು ವಿಕಾಸ ವಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿವೆ. ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಅಭಿಪ್ರಾಯಪಟ್ಟರು.

ಅವರು ಇಂದು ನ್ಯಾಷನಲ್ ಇಂಗ್ಲೀಷ್ ಶಾಲೆಯಲ್ಲಿ ಏರ್ಪಡಿಸಿದ್ದ “ಸೈನ್ಸ್ ಎಕ್ಸ್ ಪೋ” ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ತಯಾರಿಸಿರುವ ಮಾದರಿಗಳು ಇಷ್ಟಕ್ಕೇ ಸೀಮಿತವಾಗದೇ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ವಿಜ್ಞಾನವನ್ನು ಅಧ್ಯಯನ ಮಾಡಿದವರಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಇಂತಹ ಮಾದರಿಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಲಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಕ್ತರ್ ಮಾತನಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಸಾಧನೆ ಪರಿಚಯವಾಗಬೇಕು, ವಿಜ್ಞಾನದ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತರುವ ಮೂಲಕ, ತಮ್ಮ ಛಾಪನ್ನು ಮೂಡಿಸಿ ಶಾಲೆಗೆ , ಶಿಕ್ಷಕರಿಗೆ, ತಂದೆ ತಾಯಿಯರಿಗೆ ಗೌರವ ತರಲಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಸೈಯದ್ ಶುಜತ್, ವ್ಯವಸ್ಥಾಪಕರಾದ ಇಮ್ರಾನ್ ಸೈಫ್, ಪ್ರಾಂಶುಪಾಲೆ ರುಕಿಯಾ ಖಾನಂ, ಉಪ ಪ್ರಾಂಶುಪಾಲರಾದ ಶಹನಾಜ್, ಶಿಕ್ಷಕರಾದ ದಿವ್ಯಾ, ಮೋಹಸೀನಾ, ಸಾಜಿದ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *