ಬೆಂಗಳೂರು: ಲೋಕಸಭಾ ಚುಮಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ, ಜೆಡಿಎಸ್ ಕಾರ್ಯಕರ್ತರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಮೂಡಿಸಿದೆ. ವಾದ – ಪ್ರತಿವಾದಗಳ ನಡುವೆ, ಮಾಜಿ ಪ್ರಧಾನಿ ದೇವೇಗೌಡರು, ಸಿ ಎಂ ಇಬ್ರಾಹಿಂ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ದಸರಾ ಹಬ್ಬ ಮುಗಿಯುವ ತನಕ ನೋಡೋಣಾ. ವರಿಷ್ಠರು ಏನಾದರೊಂದು ತೀರ್ಮಾನ ಮಾಡುತ್ತಾರಾ ಅಂತ. ಮಾಜಿ ಪ್ರಧಾನಿ ದೇವೇಗೌಡರ ಮೇಲೆ ನನಗೆ ನಂಬಿಕೆ ಇದೆ. ವಿಜಯದಶಮಿ ಮುಗಿದ ಮೇಲೆ ನೋಡೋಣಾ ಎಂದಿದ್ದಾರೆ.
ಇನ್ನು ದೇವೇಗೌಡರಿಗೆ ಮತ್ತೊಮ್ಮೆ ಮನವಿ ಮಾಡಿದ್ದು, ದೇವೇಗೌಡರಿಗೆ ಇನ್ನೊಮ್ಮೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೀನಿ, ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಮರುಪರಿಶೀಲನೆ ಮಾಡಿ. ಯಾರನ್ನೂ ನಾನೂ ಬಹಿರಂಗವಾಗಿ ಕರೆಯುತ್ತಿಲ್ಲ. ಆದರೆ ಜಿಲ್ಲಾಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ. ಕೂತು ಮಾತನಾಡೋಣಾ ಎಂದಿದ್ದೇನೆ.
ಒಂದೇ ಕಡೆ ಕೂರುವುದಿಲ್ಲ ನಾನು. ತ್ರಿಲೋಕ ಸಂಚಾರಿ. ಹೀಗಾಗಿ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ. ನೂರಕ್ಕೆ ನೂರರಷ್ಟು ನಾನು ಮೆಂಟಲಿ, ಫಿಸಿಕಲಿ ಜೆಡಿಎಸ್ ನಲ್ಲೇ ಇದ್ದೇನೆ. ನಾನೇ ಅದರ ಅಧ್ಯಕ್ಷ ಅಂತ ಹೇಳಿದ್ದೇನೆ. ವಿಸರ್ಜನೆ ಮಾಡುವುದಕ್ಕೆ ಬರಲ್ಲ. ಒಂದು ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಾಡಿ. ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಾರ್ಟಿ. ಹೀಗಾಗಿ ರೂಲ್ಸ್ ಪ್ರಕಾರವೇ ಪಾರ್ಟಿ ನಡೆಸಬೇಕು. ತನ್ನ ಇಚ್ಛೆಯಂತೆ ಪಾರ್ಟಿ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಾನೂನು ಹೋರಾಟ ಮಾಡಯವ ಸಾಧ್ಯತೆ ಇದೆ.