ಬೆಂಗಳೂರು: ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಾಗುತ್ತಿರುವುದನ್ನು ಖಂಡಿಸಿ, ತಮ್ಮ ಆಕ್ರೋಶವನ್ನು ಸಿ ಎಂ ಇಬ್ರಾಹಿಂ ನೇರವಾಗಿಯೇ ಹೊರ ಹಾಕಿದ್ದರು. ಇದರಿಂದಾನೇ ಜೆಡಿಎಸ್ ವರಿಷ್ಠರಾದ ದೇವೇಗೌಡ ಅವರು ಸಿ ಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಿ, ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಪಕ್ಷದಿಂದಾನೇ ಅಮಾನತು ಮಾಡಿದ್ದಾರೆ.
ಇಂದು ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ತಕ್ಷಣದಿಂದ ಜಾರಿಯಾಗುವಂತೆ ಇಬ್ರಾಹಿಂ ಅವರನ್ನು ಅಮಾನತು ಮಾಡಿದ್ದಾರೆ. ಕಳೆದ ನವೆಂಬರ್ 15ರಂದು ಕೇರಳದ ತಿರುವನಂತಪುರಂ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದ ವಿರೋಧಿ ಹೇಳಿಕೆಯನ್ನು ಸಿ.ಎಂ ಇಬ್ರಾಹಿಂ ನೀಡಿದ್ದಾರೆ ಎಂಬ ಕಾರಣದಿಂದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಒರಿಜಿನಲ್ ಜೆಡಿಎಸ್ ನಮ್ಮದೆ. ನಮ್ಮ ಜೊತೆಗೆ ಎಲ್ಲರು ಇದ್ದಾರೆ ಎಂದಿದ್ದರು. ಅದರ ಜೊತೆಗೆ ಕುಮಾರಸ್ವಾಮಿ ಅವರನ್ನೇ ಉಚ್ಛಾಟನೆ ಮಾಡುವಂತ ಮಾತನಾಡಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡ ಅವರೇ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.