ಮೈಸೂರು: ಈ ಬಾರಿಯ ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯವನ್ನು ಕೈಬಿಡುವಂತೆ ದೇವನೂರು ಮಹಾದೇವಪ್ಪ ಅವರು ನಿನ್ನೆ ಪತ್ರ ಬರೆದಿದ್ದರು. ಈ ಬಗ್ಗೆ ಸಚಿವ ನಾಗೇಶ್ ಅವರು ದೇವನೂರು ಮಹಾದೇವಪ್ಪ ಹಾಗೂ ಬರಗೂರು ರಾಮಚಂದ್ರಪ್ಪ ಅವರನ್ನು ಹಲವರು ದಾರಿ ತಪ್ಪಿಸುತ್ತಿದ್ದಾರೆ ಎಂದು. ಈ ಬಗ್ಗೆ ಸಾಹಿತಿ ದೇವನೂರು ಮಹದೇವಪ್ಪ ಅವರು ಮಾತನಾಡಿದ್ದು, ಅವರನ್ನ ಯಾರು ದಾರಿ ತಪ್ಪಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಾಗಪುರ ಸಣ್ಣ ಪರಿವಾರವದು. ಆರ್ ಎಸ್ ಎಸ್ ದಾರಿ ತಪ್ಪಿಸಿದೆಯಾ..? ಅವರು ಪ್ರಶ್ನೆ ಮಾಡಬೇಕು ಇವತ್ತು ಎಂದಿದ್ದಾರೆ. ನಿಮ್ಮ ಜೊತೆ ಮಾತಾಡುತ್ತಾರಂತೆ ಎಂದಾಗ ಬಹಳ ಸಂತೋಷವೆಂದಿದ್ದಾರೆ. ಅವರ ಬಳಿ ಅಧಿಕಾರವಿದೆ. ಹೀಗಾಗಿ ಕುರುಡರಾಗಿದ್ದಾರೆ. ಕುರುಡ ಎತ್ತ ಕಡೆ ಬೇಕಾದರೂ ಡಿಕ್ಕಿ ಹೊಡೆಯಬಹುದು. ಇವತ್ತು ಆ ರೀತಿ ಆಗುತ್ತಿದೆ ಎಂದಿದ್ದಾರೆ.
ಅವರು ಮಾಡುವುದು ಮಾಡಲಿ. ಈಗ ಪರ್ಯಾಯವಾಗಿ ಮಕ್ಕಳಿಗೆ ಎಲ್ಲಿ ತಪ್ಪು ಮಾಡಿದ್ದಾರೋ ಆ ಕೊರತೆ ತುಂಬಲು, ಆ ತಪ್ಪನ್ನು ಸರಿಪಡಿಸಿ ಪಾಠ ಬರೆಯಲು, ಕೊರತೆಯ ಪಾಟ ತುಂಬಲು. ಈಗ ಸಂವಿಧಾನವನ್ನು ಮರೆತಿದ್ದಾರೆ ಅವರು. ಸಂವಿಧಾನದ ಭಾಗಗಳನ್ನು ಐದನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೂ ಹಂತ ಹಂತವಾಗಿ ತಜ್ಞರಿಂದ ಪಾಠ ಮಾಡಿಸಲು ಪ್ರಯತ್ನ ಮಾಡಬೇಕು. ಮಕ್ಕಳಿಗೆ ಮಾತ್ರ ಯಾವುದೇ ರೀತಿಯಿಂದ ತೊಂದರೆಯಾಗಬಾರದು, ವೈಜ್ಞಾನಿಕ ಮನೊಇಭಾವ ಬೆಳೆಸಿಕೊಳ್ಳಲಿ ಎಂದಿದ್ದಾರೆ.