Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲೆಕ್ಕಾಚಾರದ ದೇವನೂರು ಮಹಾದೇವ ಅವರ ಮಾತಿಗೆ ಮಹತ್ವ ಬೇಡ : ಪ್ರೊ. ಸಿ.ಕೆ.ಮಹೇಶ್

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ದಲಿತ ಚಳವಳಿಯನ್ನು ಪ್ರಭಾವಶಾಲಿ ಶಕ್ತಿಯಾಗಿ ಕಟ್ಟಿದವರು ಬೆಳೆಸಿದವರು ಪ್ರೊ. ಬಿ. ಕೃಷ್ಣಪ್ಪ ನವರು. ಅದರ ಪ್ರಭಾವವನ್ನು ಬಳಸಿಕೊಂಡು ತಮಗೂ ಮತ್ತು ತಮ್ಮವರಿಗೆ ಲಾಭ ಕೊಡಿಸಿದವರು ದೇವನೂರು ಮಹಾದೇವ ಎಂದು ಪ್ರೊ. ಸಿ.ಕೆ.ಮಹೇಶ್ ತಿಳಿಸಿದ್ದಾರೆ.

ಮೊನ್ನೆ ತನಕ ಒಳಮೀಸಲಾತಿಗೆ ತೊಡರುಗಾಲು ಹಾಕಿದವರಲ್ಲಿ ಇವರದು ಅದೃಶ್ಯದ ಶಕ್ತಿಯುತ ಕಾಲು. ಈಗ ಅವರಿಗೆ ಆ ಅಡ್ಡಗಾಲಿನ ಅಗತ್ಯ ಕಾಣುತ್ತಿಲ್ಲ. ಅದಕ್ಕೆ ಎರಡು ಕಾರಣಗಳಿರಬಹುದು. ಒಂದು ಒಳಮೀಸಲಾತಿಯ ಅನುಷ್ಠಾನ ಅಷ್ಟು ಸುಲಭವಿಲ್ಲ ಎಂಬುದಿರಬೇಕು. ಎರಡು ಒಳಮಿಸಲಾತಿಯ ಅನುಷ್ಟಾನಕ್ಕೆ ಪ್ರಭುತ್ವವು
ಖಚಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೇ ಇರಬೇಕು ಎಂಬುದಾಗಿರಬೇಕು.

ದೇವನೂರು ಮಹಾದೇವ ಅವರ ಗಾಂಧಿಯ ಒಳಗಣ್ಣಿಗೆ ಇದೆಲ್ಲಾ ಗೋಚರಿಸದ ವಿಷಯವಲ್ಲ.ಅವರ ಈಗಿನ ಅಭಿಪ್ರಾಯದಲ್ಲಿ ಯಾವ ಮಟ್ಟದ ಪ್ರಾಮಾಣಿಕತೆ
ಇದೆ ಎಂಬುದನ್ನು ಅರಿಯಲು ಅವರೇನೂ ದಲಿತರ “ಜಪ್ತಿಗೂ ಸಿಗದ ನವಿಲು” ಏನೂ ಅಲ್ಲಾ.

ದಲಿತ ಚಳವಳಿಯಲ್ಲಿ ಪ್ರೊ.ಬಿಕೆಯ ಹೆಜ್ಜೆಗಳ ಅನುಸರಿಸಿದ ಅಂದಿನ ಬಹುತೇಕ ಅಂಬೇಡ್ಕರ್ ವಾದಿಗಳಿಗೆ ಈ ನವಿಲು ಯಾರ ಸಂಗೀತಕ್ಕೆ ಯಾವ ಗಳಿಗೆಯಲ್ಲಿ ಮೈತುಂಬಿ ಕೊಂಡು ಅದ್ಭುತವಾಗಿ ನೃತ್ಯ ಮಾಡುತಿತ್ತು ಅನ್ನುವುದು ತಿಳಿಯದ ಸಂಗತಿಯಲ್ಲ.

ಉತ್ತರ ಭಾರತದ ಚಮ್ಮಾರ(ಮಾದಿಗ)ರು ಒಳಮೀಸ ಲಾತಿಯ ವಿರುದ್ಧವಿದ್ದಾರೆ. ಇದನ್ನೇ ದೇವನೂರು ಮಹಾದೇವ ಅವರ ಜಾತಿಯವರು ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಇದರ ಬಗ್ಗೆ ಯಾವ ತಕರಾರನ್ನೂ ಎತ್ತಿರಲಿಲ್ಲ. ದಿವ್ಯ ಮೌನ ಧರಿಸಿದ್ದರು.

ಆದರೆ, ಹಿರೇಹಳ್ಳಿ ಮಲ್ಲಿಕಾರ್ಜುನರು ದೇವನೂರು ಮಹಾದೇವ ಅವರ ಕುರಿತು ಪ್ರಜಾವಾಣಿಯ ಓದುಗರ ಕಾಲಮಿನಲ್ಲಿ ತೀವ್ರವಾಗಿ ತಿವಿದ ಪತ್ರವು ಅವರ ಮೌನವ್ರತವನ್ನು ಮುರಿದಿತ್ತು. ಆ ತಿವಿತ ಯಾವ ಪ್ರಮಾಣದಲ್ಲಿ ಇತ್ತೆಂದರೆ ದೇವನೂರು ಮಹಾದೇವ ಅವರು ತಮ್ಮ ಗುಹೆಯಲ್ಲಿ ಬಚ್ಚಿಟ್ಟ ಮುಚ್ಚಿಟ್ಟ ಒಳಮೀಸಲಾತಿಯ ವಿರೋಧಿ ಅಭಿಪ್ರಾಯವನ್ನು ಬಯಲಿಗೆ ತರದೆ ಇರಲು ಸಾಧ್ಯವಿರಲಿಲ್ಲ.

ಬಯಲು ಗೊಳಿಸಿದ ಅಭಿಪ್ರಾಯದಲ್ಲಿ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಅನ್ನುವುದಕ್ಕೆ ತಕ್ಕನಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ತಮ್ಮ ಅಭಿಪ್ರಾಯವನ್ನು ಗೀಚಿ ಪ್ರಜಾವಾಣಿಯಲ್ಲಿ ಪ್ರಕಟಿಸಿಕೊಂಡಿದ್ದರು.ಅಲ್ಲಿಗೆ, ಅವರು ಅಂದು ಪೂರ್ಣವಾಗಿ ಬಯಲಾಗಿರಲಿಲ್ಲ. ಈಗೇನೋ ಅವರು ಬಯಲಾಗಿದ್ದಾರೆ.ಸುಪ್ರೀಂ ಕೋರ್ಟ್ ತೀರ್ಪನ್ನು ಬಹಿರಂಗವಾಗಿ ವಿರೋಧಿಸುವುದಕ್ಕೆ ತಮಗೆ ಕಷ್ಟ ಸಾಧ್ಯವಿದೆ ಎಂದು ಕೊಂಡಿರ ಬಹುದಾದ ದೇವನೂರರು ತಮ್ಮ ಮನಸ್ಸಿನ ಗುಹೆಯಲ್ಲಿರುವ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಯಲಾಗಿದ್ದಾರೆ.

ಅದಕ್ಕೆ ಕಾರಣವು ಒಳ ಮೀಸಲಾತಿಯ ಅವರ ಒಡಲಿನ ವಿಷಯವು ಉತ್ತರ ಭಾರತದ ಚಮ್ಮಾರರ
ಕ್ರಿಯೆಗಳಲ್ಲಿ ಪ್ರಕಟವಾಗುತ್ತಿರುವುದಕ್ಕಾಗಿ ಇಲ್ಲದೇ ಇರುವುದಿಲ್ಲ.ಅದಕ್ಕಾಗಿ ಕೆಲವು ಬರಹಗಾರರಿಗೆ ದೇವನೂರರ ಮಾತುಗಳು ಮಹತ್ವದವಾಗಿ ಕಂಡರೂ ಮೂವತ್ತು ವರ್ಷಗಳಿಂದ ಒಂದಲ್ಲ ಒಂದು ಬಗೆಯ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿ ಕೊಂಡಿರುವ ಹೋರಾಟಗಾರರಿಗೆ ಶ್ರೀಯುತರ ಪಕ್ಕಾ ಲೆಕ್ಕಾಚಾರದ ಮಾತುಗಳು ಮಹತ್ವದವಾಗಿ ಕಾಣದಿದ್ದರೇನು ವಿಸ್ಮಯವಲ್ಲ.

ಕಟ್ಟ ಕಡೆಯ ಮಾದಿಗರು,ಹೊಲೆಯರು,ವಾಲ್ಮೀಕಿ
ಗಳು ಹಾಗೂ ಮೀಸಲಾತಿಯ ಪಟ್ಟಿಯಲ್ಲಿರುವ ಮತ್ತಿತರೆ ಕಡೆಯ ಜಾತ್ಯಸ್ತರು ಕೆನೆಪದರು ರಿಕ್ತ ಒಳಮೀಸಲಾತಿಯಿಂದ ಮತ್ತಷ್ಟು ಕಟ್ಟ ಕಡೆಗೆ ತಳ್ಳಲ್ಪಡುತ್ತಾರೆ.ಕಾರಣ,ಸುಪ್ರೀಮ್ ಕೋರ್ಟಿನ ಕೆನೆಪದರು ಅಭಿಪ್ರಾಯವು ಒಳಮೀಸಲಾತಿಯ ಆದೇಶದ ಭಾಗವಾಗದಿದ್ದರೆ ಅದೊಂದು ಕ್ರೂರ ಆದೇಶವಾಗುತ್ತದೆ.ಜೊತೆಗೆ,ಕೇವಲ ಹತ್ತು ವರ್ಷಗಳಲ್ಲಿ ಈ ಎಲ್ಲಾ ಜಾತಿಗಳಲ್ಲಿ ತೀವ್ರ ತರಹದ ಬಿಕ್ಕಟ್ಟು ಮುಗ್ಗಟ್ಟುಗಳು ತಲೆದೋರುತ್ತವೆ.ಈ ದೃಷ್ಟಿಯಿಂದ ದೇವನೂರರ ಮಾತುಗಳು ದೂರದೃಷ್ಟಿಯ ಕೊರತೆಯಿಂದ ಬಡಕಲಾಗಿವೆ.ಇಷ್ಟಿದ್ದರೂ ಅವರು ತಮ್ಮ ಇಳಿ ವಯಸ್ಸಿನ ಮಾತುಗಳಲ್ಲಿ ತೋರಿಕೆಗಾದರು ಸತ್ಯದ ಪಂಜನ್ನು ಹಿಡಿದಿದ್ದಾರೆ ಅನಿಸದಿರದು ಎಂದು ಫ್ರೊ. ಸಿ.ಕೆ.ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!