ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ : ಕಾನೂನು ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 07 : ಸನಾತನ ಹಿಂದೂ ಧರ್ಮವನ್ನು ಅವಮಾನಿಸಿರಿರುವ ವಿರುದ್ದ ಹಿಂದು ಜಾಗರಣ ವೇದಿಕೆ ಪ್ರತಿಭಟನೆಯನ್ನು ನಡೆಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳನ್ನು ಒತ್ತಾಯಿಸಲಾಯಿತು.

ಸನಾತನ ಹಿಂದೂ ಧರ್ಮವನ್ನು ಡೆಂಘೀ ರೋಗಕ್ಕೆ ಹೋಲಿಸಿ ಉದ್ದೇಶಪೂರ್ವಕವಾಗಿ ದ್ವೇಷಪೂರಿತ ಮಾತುಗಳಿಂದ ಹಿಂದೂ ಧಾರ್ಮಿಕ ಭಾವನೆಗೆ ಹಾಗೆ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಚಿಸುವ ಹಾಗೂ ಸಾಮರಸ್ಯ್ಯವನ್ನು ಕದಡುವ ಪೂರ್ವಗ್ರಹ ಪೀಡಿಸುವಂತೆ ಮಾತಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರವರ ಪುತ್ರ ಉದಯನಿಧಿ, ಸ್ಟಾಲಿನ್ ಸನಾತನ ಹಿಂದೂ ಧರ್ಮವನ್ನು ಉದ್ದೇಶಿಸಿ, ಸನಾತನ ಧರ್ಮ ಡೆಂಘೀ ಇದ್ದಂತೆ, ಅದನ್ನು ವಿರೋಧಿಸಿದರೆ ಸಾಲದು ಅದನ್ನು ಸೊಳ್ಳೆಗಳು, ಡೆಂಘೀಜ್ವರ, ಮಲೇರಿಯಾ, ಕೊರೊನಾ ರೋಗಗಳನ್ನು ನಿರ್ಮೂಲನೆ ಮಾಡಿದಂತೆ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ದೇಶಪೂರಿತ ಮಾತುಗಳನ್ನಾಡಿ ಹಿಂದೂ ಧಾರ್ಮಿಕ ಭಾವನೆ ಹಾಗೂ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿರುತ್ತಾರೆ ಎಂದು ದೂರಿದರು.

ಧರ್ಮ ಜನಾಂಗ ನಂಬಿಕೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಶವನ್ನು ಉತ್ತೇಜಿಸುವ ಹಾಗೂ ಸಾಮರಸ್ಯವನ್ನು ಕದಡುವ ಪೂರ್ವಗ್ರಹ ಹಿಡಿಸುವಂತೆ ಮಾತಾಡಿರುತ್ತಾರೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗಿರುತ್ತದೆ. ಭಾರತೀಯ ದಂಡ ಸಂಹಿತೆ ಕಲಂ 1538 ಹಾಗೂ 295ಂ ಪ್ರಕಾರ ಅಪರಾಧವಾಗಿದ್ದು, ಈ ಹಿನ್ನಲೆಯಲ್ಲಿ ಅರೋಪಿ ಉದಯನಿಧಿ ಸ್ಟಾಲಿನ್ ಇತನ ವಿರುದ್ಧ ಸೂಕ್ತ ಕಾನೂನು ಜರುಗಿಸಿ ಕ್ರಮ ತೆಗೆದುಕೊಳ್ಳಬೇಕಾಗಿ ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾದ ವಿರೇಂದ್ರ ಕುಮಾರ್, ಶಿವಶಕ್ತಿ ಬಾಲಾಜಿ, ರವಿಕುಮಾರ್, ಗರಡು ಕೇಸರಿ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Share This Article
Leave a Comment

Leave a Reply

Your email address will not be published. Required fields are marked *