ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ (ಮಾ. 24) ನಗರದ ರೋಟರಿಕ್ಲಬ್‍ವತಿಯಿಂದ ರೋಟರಿ ಶಾಲೆಯ ಮಕ್ಕಳಿಗೆ ದಂತ ತಪಾಸಣಾ ಶಿಬಿರವನ್ನು ಇಂದು ನಗರದ ರೋಟರಿ ಬಾಲಭವನದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಜೆ.ಎಂ. ದಂತ ಮಹಾ ವಿದ್ಯಾಲಯದ ಎಚ್.ಓ.ಡಿ. ಡಾ.ಜಯಚಂದ್ರ ಹಲ್ಲುಗಳು ನಮ್ಮ ಜೀವ ರಕ್ಷಕ ಅವುಗಳನ್ನು ಸರಿಯಾಗಿ ಜೋಪಾನ ಮಾಡಬೇಕಿದೆ, ಚಿಕ್ಕ ವಯಸ್ಸಿನಲ್ಲಿಯೇ ಅವುಗಳನ್ನು ಸರಿಯಾದ ರೀತಿಯಲ್ಲಿ ಉಜ್ಜುವುದರ ಮೂಲಕ ಸಂರಕ್ಷಣೆಯನ್ನು ಮಾಡಬೇಕಿದೆ. ಪ್ರತಿ ದಿನ ಎರಡು ಭಾರಿ ಬ್ರಷ್ ಮಾಡುವುದರ ಮೂಲಕ ದಂತವನ್ನು ರಕ್ಷಣೆ ಮಾಡಬೇಕಿದೆ ನೀವು ಯಾವುದೇ ಬ್ರಷ್ ಉಪಯೋಗಿಸಿದರು ಸಹಾ ಹಾರ್ಡ ಮತ್ತು ಸ್ಪೂತ್ ಉಪಯೋಗಿಸದೇ ಮೀಡಿಯಂ ಬ್ರಷ್‍ನ್ನು ಉಪಯೋಗ ಮಾಡಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ಏನಾದರೂ ಹಲ್ಲಿನ ತೊಂದರೆ ಇದ್ದರೆ ಸರಿಪಡಿಸಿಕೊಳ್ಳಬೇಕಿದೆ ಮುಂದೆ ತೊಂದರೆಯಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ರೋಟರಿಕ್ಲಬ್ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ. ರೋಟೇರಿಯನ್‍ಗಳಾದ ಶಿವರಾಂ. ಕುರುಬರಹಳ್ಳಿ ಶಿವಣ್ಣ, ಮಧುಪ್ರಸಾದ್, ವಿಶ್ವನಾಥ್, ಮೈಲೇಶ್, ಡಾ.ಅಮೃತ ಪ್ರದೀಪ್, ಡಾ.ಪ್ರಿಯದರ್ಶಿನಿ, ಅಮೃತ್ ಸೇರಿದಂತೆವ ಇತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ 150 ಮಕ್ಕಳಿಗೆ ದಂತವನ್ನು ತಪಾಸಣೆಯನ್ನು ಮಾಡಲಾಯಿತು.