ತುಮಕೂರು: ಈಗಷ್ಟೇ ಚಳಿಗಾಲ ಕಳೆದು ಬೇಸಿಗೆ ಶುರುವಾಗಿದೆ. ರೋಗ ರುಜಿನಗಳು ಆರಂಭವಾಗುತ್ತಿವೆ. ವೈರಲ್ ಫೀವರ್ ಜೊತೆಗೆ ಡೇಂಘಿ ಜ್ಚರ ಕೂಡ ಕಾಣಿಸಿಕೊಳ್ಳುತ್ತಿದೆ. ಇದೀಗ ತುಮಕೂರು ಜಿಲ್ಲೆಯಲ್ಲಿ ಡೇಂಗಿಗೆ ಬಾಲಕ ಬಲಿಯಾಗಿದ್ದಾನೆ. 7 ವರ್ಷದ ಕರುಣಾಕರ್ ಎಂಬ ಬಾಲಕ ಈ ಡೇಂಘಿಗೆ ಬಲಿಯಾಗಿದ್ದಾನೆ. ಪುತ್ರನನ್ನು ಕಳೆದುಕೊಂಡು ಹರೀಶ್ ಕುಮಾರ್ ಮನೆಯಲ್ಲಿ ದುಃಖ ಮಡುಗಟ್ಟಿದೆ. ಮಗನ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿದ್ದರು. ಈಗಿನ್ನು 2 ತರಗತಿಯಲ್ಲಿದ್ದ. ಓದುವ ವಿಚಾರಕ್ಕೂ ತಂದೆ ತಾಯಿ ದೊಡ್ಡ ಕನಸ್ಸನ್ನೇ ಕಟ್ಟಿಕೊಂಡಿದ್ದರು. ಈಗ ವಿಧಿ ಅವನನ್ನು ಬಿಡದೆ ಎಳೆದುಕೊಂಡು ಹೋಗಿದೆ. ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಈ ಘಟನೆ ನಡೆದಿದೆ.
![](https://suddione.com/content/uploads/2024/10/gifmaker_me-5-1.gif)
ಕರುಣಾಕರ್ ಗೆ ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಕಳೆದ 8 ದಿನಗಳಿಂದ ಪಾವಗಡದ ಸುಧಾ ಕ್ಲಿನಿಕ್ ನಲ್ಲಿಯೇ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕರುಣಾಕರ್ ಸಾವನ್ನಪ್ಪಿದ್ದಾನೆ. ಇತ್ತ ಪೋಷಕರಿಗೆ ಕ್ಲಿನಿಕ್ ನವರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಯಾಕಂದ್ರೆ ಬಾಲಕನ ಕೊನೆ ಕ್ಷಣದವರೆಗೂ ಡೇಂಘೀ ಜ್ವರ ಬಂದಿದೆ ಎಂದು ಹೇಳಿರಲಿಲ್ಲವಂತೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಾನೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆಯನ್ನು ಮಾಡಿದ್ದಾರೆ.
ಡೇಂಘಿ ಜ್ವರದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ. ದದ್ದುಗಳು, ಕಣ್ಣುನೋವು, ತೀವ್ರ ತಲೆನೋವು, ಹೆಚ್ಚಿನ ಜ್ವರ, ವಾಂತಿ ಮತ್ತು ವಾಕರಿಕೆ, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇನಾದರೂ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ತೋರಿಸಿ. ಹಾಗೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸಿ.
![](https://suddione.com/content/uploads/2025/01/studio-11.webp)