ಮಳೆಗಾಲ ಶುರುವಾಯ್ತು ಅಂದ್ರೆ ಹಲವು ರೀತಿಯ ವೈರಸ್ ಗಳು ಶುರುವಾಗುತ್ತವೆ. ನಾನಾ ಕಾಯಿಲೆಗಳು ಹರಡುವುದಕ್ಕೆ ಶುರುವಾಗುತ್ತೆ. ಅದರಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ 4 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಡೆಂಗ್ಯೂ ಪ್ರಕರಣ ಇನ್ನಷ್ಟು ಜಾಸ್ತಿಯಾಗಿದೆ. ಹೀಗಾಗಿ ಜನ ಎಚ್ಚರದಿಂದ ಇರಬೇಕಾಗಿದೆ. ಜ್ವರ, ತಲೆನೋವು, ಸುಸ್ತು, ವಾಂತಿ, ಗಂಟಲು ನೋವು, ಮೈಕೈ ನೋವು, ಹೊಟ್ಟೆ ನೋವು, ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.
ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವ ಕಾರಣ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆಗಳು ಕಡಿಯಿವುದರಿಂದ ಡೆಂಗ್ಯೂ ಜೊತೆಗೆ ನಾನಾ ಕಾಯಿಲೆಗಳು ಹರಡುತ್ತವೆ. ಹೀಗಾಗಿ ಜನ ಕೂಡ ಆರೋಗ್ಯದ ದೃಷ್ಟಿಯಿಂದ ಎಚ್ಚರವಾಗಿರಬೇಕಾಗಿದೆ.