ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ ಹೆಚ್ಚಾಯ್ತು ಡೆಂಗ್ಯೂ ಪ್ರಕರಣ : ಎಚ್ಚರದಿಂದ ಇರಲು ಜನರಿಗೆ ಸೂಚನೆ

1 Min Read

 

 

ಮಳೆಗಾಲ, ಚಳಿಗಾಲದಲ್ಲಿ ವೈರಸ್ ಗಳು ಉಲ್ಬಣಗೊಳ್ಳುತ್ತವೆ. ಅದರಲ್ಲೂ ಇತ್ತಿಚೆಗೆ ಡೆಂಗ್ಯೂ ಕೇಸ್ ಹೆಚ್ಚಳವಾಗುತ್ತಿದೆ. ಇದು ಜನರಿಗೆ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಬೆಂಗಳೂರು ನಗರ ಒಂದರಲ್ಲೇ ಒಂದೇ ತಿಂಗಳಲ್ಲಿ ಡೆಂಗ್ಯೂ ಪ್ರಕರಣ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂಬುದನ್ನು ಆರೋಗ್ಯ ಇಲಾಖೆ ತಿಳಿಸಿದೆ.

ಕೇವಲ ಒಂದೇ ತಿಂಗಳಲ್ಲಿ 1,400ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿ ಆಗಿವೆ. ಕಳೆದ ತಿಂಗಳು ನವೆಂಬರ್ 1ರಿಂದ ಡಿಸೆಂಬರ್ 8ರವರೆಗೆ ನಗರದಲ್ಲಿ ಒಟ್ಟು 7,600 ಕ್ಕೂ ಹೆಚ್ಚು ಮಂದಿಯಲ್ಲಿ ಡೆಂಗ್ಯೂ ಕಾಯಿಲೆ ಲಕ್ಷಣಗಳು ಕಂಡು ಬಂದವು. ಈ ವೇಳೆ ಅವರನ್ನು ಪರಿಶೀಲನೆಗೆ ಒಳಪಡಿಸಿದಾಗ 1,460ಕ್ಕೂ ಅಧಿಕ ಮಂದಿಗೆ ಡೆಂಗ್ಯೂ ಕಾಯಿಲೆ ಇರುವುದು ದೃಢಪಟ್ಟಿದೆ.

ತಂಪು ವಾತಾವರಣ ಜೊತೆಗೆ ಬಿಸಿಲು, ಆಗಾಗ ಮಳೆಯಂತಹ ವಾತಾವರಣದಿಂದ ಸೊಳ್ಳೆಗಳ ವಿಪರೀತವಾಗಿ ಹೆಚ್ಚಾಗಿವೆ. ಇದರಿಂದ ಡೆಂಗ್ಯೂ ಪ್ರಕರಣ ಕಂಡು ಬರುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ನಗರದ ನಾಗರೀಕರು ಅರೋಗ್ಯ ಕಾಳಜಿ ವಹಿಸುವುದು ಅಗತ್ಯವಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದ ವಾತಾವರಣದಲ್ಲಿ ಏರುಪೇರಾಗಿರುವ ಕಾರಣ, ಹಲವು ರೀತಿಯ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತೆ ಆಗಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವುದು ಬಹಳ ಮುಖ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *