IPL 15ನೇ ಆವೃತ್ತಿ ಶುರುವಾಗಿದೆ. ಪಂದ್ಯಗಳು ರೋಚಕವಾಗಿ ನಡೆಯುತ್ತಿವೆ. ಆದ್ರೆ ಐಪಿಎಲ್ ಮ್ಯಾಚ್ ಶುರುವಾಗೋದಕ್ಕೂ ಮುಂಚೆಯೇ ಕೆಲವೊಂದು ಟೀಂಗಳಿಗೆ ಆತಂಕ ಎದುರಾಗಿತ್ತು. ಪಂದ್ಯ ಆರಂಭದಲ್ಲೂ ಹೆಚ್ಚು ಹೋಪ್ ಇಟ್ಟುಕೊಂಡಿದ್ದ ಆಟಗಾರರು ಅಲಭ್ಯರಾಗಿದ್ದರು. ಈ ಟೆನ್ಶನ್ ಡೆಲ್ಲಿ ಕ್ಯಾಪಿಟಲ್ ಗೂ ಕಾಡಿತ್ತು. ಆದರೆ ಇದೀಗ ಡೆಲ್ಲಿ ಕ್ಯಾಪಿಟಲ್ ಗೆ ಆನೆ ಬಲ ಸಿಕ್ಕಿದೆ.
ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ ಗೆದ್ದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಮುಖಾ ಮುಖಿಯಾಗಿದ್ದ ಡೆಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿತ್ತು. ಇದೀಗ ಮತ್ತಷ್ಟು ಗೆಲುವು ಸಿಗಲಿದೆ ಎಂಬುದು ಫ್ಯಾನ್ಸ್ ಗಳ ಹುಮ್ಮಸ್ಸಾಗಿದೆ. ಯಾಕಂದ್ರೆ ಇಷ್ಟು ದಿನದಿಂದ ಇಂಜುರಿಯಿಂದ ಪಂದ್ಯಕ್ಕೆ ಬಾರದ ಎನ್ರಿಚ್ ನೋಕಿಯಾ ಇದೀಗ ಗುಣಮುಖರಾಗಿದ್ದಾರೆ.
ನೋಕಿಯಾಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನ ಮಾಡಿಸಿದ್ದೇವೆ. ಇಂಜುರಿಯಿಂದ ರಿಕವರಿಯಂತು ಆಗಿದ್ದಾರೆ. ಆದರೆ ರಿಹಾಬ್ ನಲ್ಲಿ ಮುಂದುವರೆಯಬೇಕಾದ ಅಗತ್ಯತೆ ಇದೆ ಎಂದು ಸಿಎಸ್ಎ ಮೆಡಿಕಲ್ ಚೀಫ್ ಶುಯಬ್ ಮಾಂಜ್ರಾ ಮಾಹಿತಿ ನೀಡಿದ್ದಾರೆ.