Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೆಹಲಿ ಜಂತರ್ ಮಂತರ್ ಪ್ರತಿಭಟನೆ ವಿದ್ಯಾರ್ಥಿಗಳದ್ದಲ್ಲ, ವಿದೇಶಿ ಪ್ರಾಯೋಜಿತ ಷಡ್ಯಂತ್ರ: ಶಿವನಗೌಡ ಪಾಟೀಲ್ ಆರೋಪ

---Advertisement---

ಸುದ್ದಿಒನ್, ದಾವಣಗೆರೆ, ಜುಲೈ. 22: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಕೇವಲ ವಿದ್ಯಾರ್ಥಿಗಳ ಚಳವಳಿಯಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ದೇಶವಿರೋಧಿ ಷಡ್ಯಂತ್ರ ಎಂದು ಬಿಜೆಪಿ ಯುವ ಮುಖಂಡ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

“ನೀಟ್ ವಿದ್ಯಾರ್ಥಿಗಳ ಭವಿಷ್ಯದ ನೆಪವೊಡ್ಡಿ ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಮುಗ್ಧ ವಿದ್ಯಾರ್ಥಿಗಳ ಮುಖವಾಡದ ಹಿಂದೆ ಮಾವೋವಾದಿಗಳು ಮತ್ತು ದೇಶದ್ರೋಹಿ ಶಕ್ತಿಗಳು ಅಡಗಿವೆ” ಎಂದು ಖಂಡಿಸಿದ್ದಾರೆ.

ನೇಪಾಳ, ಬಾಂಗ್ಲಾದೇಶ ಮಾದರಿಯ ದಂಗೆ ಸಂಚು:
“ಪೆನ್ನು ಹಿಡಿಯಬೇಕಾದ ಕೈಗಳಿಗೆ ಕಲ್ಲು ನೀಡಿ ದೇಶದಲ್ಲಿ ಅಶಾಂತಿ ಹಬ್ಬಿಸಲಾಗುತ್ತಿದೆ. ಶಿಕ್ಷಣ ಸುಧಾರಣೆಯ ನೆಪದಲ್ಲಿ ‘ತುಕ್ಡೇ-ತುಕ್ಡೇ ಗ್ಯಾಂಗ್’ ನೇಪಾಳ ಹಾಗೂ ಬಾಂಗ್ಲಾದೇಶ ಮಾದರಿಯ ಗಲಭೆ ಸೃಷ್ಟಿಸಿ, ಚುನಾಯಿತ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದೆ. ವಿದೇಶಿ ಪ್ರಾಯೋಜಿತ ಈ ಕುತಂತ್ರಕ್ಕೆ ಭಾರತ ಎಂದಿಗೂ ತಲೆಬಾಗುವುದಿಲ್ಲ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now