ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಆಗಾಗ ತಲೆದೂರತ್ತಲೇ ಇರುತ್ತದೆ. ಇದೀಗ ಮತ್ತೆ ವಾಯುಮಾಲಿನ್ಯ ಹೆಚ್ಚಾಗಿದ್ದು, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಾಳೆಯಿಂದಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಸಂಬಂಧ ಕೇಜ್ರೀವಾಲ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಶಾಲೆ ಮರು ಪ್ರಾರಂಭ ಮಾಡಿರುವ ಬಗ್ಗೆ ಟೀಕಿಸಿದೆ. ಮೂರು ಮತ್ತು ನಾಲ್ಕು ವರ್ಷದ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ವಯಸ್ಕರರು ಮನೆಯಲ್ಲೇ ಕುಳಿತಿದ್ದಾರೆ ಎಂದಿದೆ.
ವಾಯು ಮಾಲಿನ್ಯ ಹೆಚ್ಚಳದ ಅರ್ಜಿ ವಿಚಾರಣೆ ವೇಳೆ ದೆಹಲಿ ಸರ್ಕಾರಕ್ಕೆ ವಾಯು ಮಾಲಿನ್ಯದ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದೆ. ಅಷ್ಟೇ ಅಲ್ಲ ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆ ಗಳಿಗೆ ಖಡಕ್ ಎಚ್ಚರಿಕೆ ಕೊಡಲು ಸೂಚಿಸಿದೆ. ವಾಯಿ ಮಾಲಿನ್ಯ ಕಡಿಮೆಯಾಗಿದೆ ಎಂದು ದೆಹಲಿ ಸರ್ಕಾರ ವಾದ ಮಂಡಿಸಿದೆ. ಆದ್ರೆ ವಾತು ಮಾಲಿನ್ಯ ಜಾಸ್ತಿಯೆ ಇದೆ ಎಂದು ಸುಪ್ರೀಂ ಸೂಚನೆ ನೀಡಿದೆ.
ಹೀಗಾಗಿ ವಾಯುಮಾಲಿನ್ಯದ ಮಟ್ಟ ಹೆಚ್ಚಾಗಿರೋ ಕಾರಣದಿಂದಾಗಿ ಮುಂದಿನ ಸೂಚಬೆವರೆಗೆ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದು, ಈ ಸಂಬಂಧ ರಾಜ್ಯ ಪರಿಸರ ಸಚಿವ ಗೋಪಾಲ್ ರಾಯ್ ಆದೇಶ ಹೊರಡಿಸಿದ್ದಾರೆ.