ಉತ್ತರ ಭಾರತದಲ್ಲಿ ಭೂಕಂಪ : ಟರ್ಕಿಯಂತೆ ಭಾರತದಲ್ಲೂ ಭಾರಿ ಭೂಕಂಪ ಸಾಧ್ಯತೆ…!

ನವದೆಹಲಿ : ಉತ್ತರ ಭಾರತದ ಹಲವೆಡೆ ಬುಧವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ.

ನೆರೆಯ ನೇಪಾಳದಲ್ಲೂ ಭೂಕಂಪ ಸಂಭವಿಸಿದೆ. ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರವು ಬುಧವಾರ ಮಧ್ಯಾಹ್ನ 1.45 ರ ಸುಮಾರಿಗೆ ಬಜುರಾದಲ್ಲಿ ರಿಕ್ಟರ್ ಮಾಪಕದಲ್ಲಿ 5.2 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ.
ಭೂಕಂಪದ ಕೇಂದ್ರವು 10 ಕಿ.ಮೀ ಆಳದಲ್ಲಿದೆ ಎಂದು ತಿಳಿಸಿದೆ.

ಮತ್ತೊಂದೆಡೆ, ದಕ್ಷಿಣ ಭಾರತದಲ್ಲಿಯೂ ಭೂಕಂಪನದ ಅನುಭವವಾಗಿದೆ. ಚೆನ್ನೈ ನಗರದಲ್ಲಿ ​​ಸ್ವಲ್ಪ ಪ್ರಮಾಣದ ಕಂಪನ ಉಂಟಾಗಿದೆ. ಅಣ್ಣಾ ಸಲೈ ಮತ್ತು ವೈಟ್ಸ್ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ವೇಳೆ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ‌. ಈ ಭಾಗದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದ ಈ ರೀತಿಯ ಭೂ ಕಂಪನ ಆಗಿದೆ ಎನ್ನಲಾಗಿದೆ. ಆದರೆ, ಮೆಟ್ರೋ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಕಂಪನ ಅಥವಾ ಭೂಕಂಪವನ್ನು ಉಂಟುಮಾಡುವಂತಹ ಯಾವುದೇ ಕೆಲಸವನ್ನು ಪ್ರಸ್ತುತ ಮಾಡಲಾಗುತ್ತಿಲ್ಲ ಎಂದು ಅವರು ಹೇಳಿದರು. ಚೆನ್ನೈನಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರವೂ ತಿಳಿಸಿದೆ.

ಚೆನ್ನೈನಲ್ಲಿ ಅಲ್ಪಸ್ವಲ್ಪ ಭೂಕಂಪವಾಗಿದೆ ಎಂದು ದೆಹಲಿಯ ರಾಷ್ಟ್ರೀಯ ಭೂಕಂಪ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಆದರೆ ಅಂತಹ ದತ್ತಾಂಶವನ್ನು ತಮ್ಮ ಕಚೇರಿಯಲ್ಲಿ ದಾಖಲಿಸಿಲ್ಲ’ ಎಂದು ದಕ್ಷಿಣ ಹವಾಮಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಬಾಲಚಂದ್ರನ್ ಹೇಳಿದ್ದಾರೆ.

ಏತನ್ಮಧ್ಯೆ, ಇತ್ತೀಚೆಗೆ ಹೈದರಾಬಾದ್‌ನ ಎನ್‌ಜಿಆರ್‌ಐ ವಿಜ್ಞಾನಿಗಳು ಟರ್ಕಿಯಂತೆಯೇ ಭಾರತದಲ್ಲೂ ಭಾರಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಉತ್ತರಾಖಂಡದಲ್ಲಿ ಯಾವಾಗ ಬೇಕಾದರೂ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *