ದೆಹಲಿಯಲ್ಲಿ ಮತ್ತೆ 1.40 ಲಕ್ಷ ಸಿಸಿಟಿವಿ ಅಳವಡಿಕೆ : ಕಾರಣ ಬಿಚ್ಚಿಟ್ಟ ಸಿಎಂ ಕೇಜ್ರಿವಾಲ್..!

ನವದೆಹಲಿ: ಸಿಸಿಟಿವಿಗಳು ಇದ್ದಷ್ಟು ಅಪರಾಧ ಪ್ರಕರಣಗಳು ಸಹಜವಾಗಿಯೇ ಕಡಿಮೆಯಾಗುತ್ತವೆ.

ಅಪರಾಧ ಮಾಡುವವರು ಸಿಸಿಟಿವಿಯಿರುವ ಭಯಕ್ಕಾದರೂ ಹಿಂದು ಮುಂದು ನೋಡ್ತಾರೆ. ಜೊತೆಗೆ ಮಹಿಳೆಯರಿಗೆ ಸ್ವಲ್ಪ ಭದ್ರತೆಯೂ ಸಿಗುತ್ತದೆ ಎಂಬ ದೃಷ್ಟಿಯಿಂದ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮತ್ತಷ್ಟು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ.

ಈಗಾಗಲೇ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿವರೆಗೆ ಸುಮಾರು 2.75 ಲಕ್ಷ ಸಿಸಿಟಿವಿ ಅಳವಡಿಸಿದ್ದಾರೆ. ಇದೀಗ ಮತ್ತೆ 1.40 ಲಕ್ಷ ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ. ಸಮೀಕ್ಷೆಯ ಪ್ರಕಾರ ವಿಶ್ವದ 150 ನಗರಗಳ ಪೈಕಿ ಸಿಸಿಟಿವಿ ಅಳವಡಿಕೆಯಲ್ಲಿ ದೆಹಲಿಯ ನಗರವೇ ಮುಂದೆ ಇದೆ.

ಈ ಬಗ್ಗೆ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ನ್ಯೂಯಾರ್ಕ್, ಲಂಡನ್, ಪ್ಯಾರೀಸ್ ಗಿಂತ ಸಾಕಷ್ಟು ಮುಂದೆ ಇದ್ದೇವೆ. ಸಿಸಿಟಿವಿಗಳನ್ನು ಅಳವಡಿಸುವುದರಿಂದ ಮಹಿಳಾ ಭದ್ರತೆಯೂ ಹೆಚ್ಚಾಗಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *