ಬೆಂಗಳೂರು: ಲಕ್ಷಾಂತರ ಮತದಾರರ ಹೆಸರು ಪಟ್ಟಿಯಲ್ಲಿಯೇ ಇಲ್ಲದಂತೆ ಡಿಲಿಟ್ ಆಗಿದೆ. ಬದುಕಿದ್ದವರ ಹೆಸರನ್ನೇ ತೆಗೆದು ಹಾಕಿದ್ದಾರೆ. ಈ ಸಂಬಂಧ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು, ಇಂದು ಮಧ್ಯಾಹ್ನದ ಒಳಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಇಂದು ಬೆಳಗ್ಗೆಯೇ ಕಾಂಗ್ರೆಸ್ ನಾಯಕರು ಬಿಬಿಎಂಪಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದೆ.
ಇನ್ನು ಚಿಲುಮೆ ಸಂಸ್ಥೆಯಲ್ಲಿ ವೋಟರ್ ಐಡಿ ದುರ್ಬಳಕೆ ಮಾತ್ರವಲ್ಲ ಇನ್ನು ಹಲವು ದಂಧೆಗಳು ನಡೆಯುತ್ತಿದ್ದವು ಎಂದು ಆರೋಪ ಮಾಡಿದ್ದಾರೆ. ಇದೊಂದು NGO ಮಾತ್ರ ಆಗಿತ್ತು. ಸಮಾಜಸೇವೆ ಮಾಡುವುದಕ್ಕೆ ಅಂತ ಇರುವ ಸಂಸ್ಥೆಯಲ್ಲಿ ನೋಟ್ ಮಷಿನ್ ಯಾಕೆ ಇತ್ತು ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ. ಬ್ಲಾಕ್ ಮನಿಯನ್ನು ವೈಟ್ ಮಾಡುವ ಕೆಲಸವನ್ನು ಚಿಲುಮೆ ಸಂಸ್ಥೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಕಾಲೇಜು ವಿದ್ಯಾರ್ಥಿ ವೋಟರ್ ಐಡಿಯನ್ನು ಬಳಸಿ ವೋಟರ್ ಸರ್ವೆ ಮಾಡುತ್ತಿದ್ದರು. ಬಸವನಗುಡಿಯ ವ್ಯಕ್ತಿಯೊಬ್ಬ ಅನುಮಾನಗೊಂಡು ಪ್ರಶ್ನಿಸಿದಾಗ ಅಲ್ಲಿನ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ.
ಇನ್ನು ದಾವಣಗೆರೆಯಲ್ಲೂ ಡಿಲೀಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹೋರಾಟಗಾರ ಹನೀಷ್ ಪಾಷ ಈ ಆರೋಪ ಮಾಡಿದ್ದಾರೆ. ಮುಸ್ಲಿಂ, ದಲಿತ ಸಮುದಾಯದವರ ಹೆಸರೇ ಡಿಲೀಟ್ ಆಗಿದೆ. ನನ್ನ ತಾಯಿ ಹೆಸರು ಕೂಡ ಡಿಲೀಟ್ ಆಗಿದೆ. ಪಾಲಿಕೆ ಸಿಬ್ಬಂದಿ ವಿಚಾರಿಸಿದರೆ ಮನೆಗೆ ಬಂದಾಗ ಅವರು ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಮನಹರಿಸಬೇಕಾಗಿದೆ ಎಂದಿದ್ದಾರೆ.