ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ. ಈ ಬಾರಿ ಗೆದ್ದು, ಮುಖ್ಯಮಂತ್ರಿ ಆಗಲೇಬೇಕೆಂದುಕೊಂಡಿದ್ದಾರೆ. ಜೊತೆಗೆ ಅವರ ಬೆಂಬಲಿಗೂ ಅದೇ ಆಸೆ. ಹೀಗಾಗಿ ಬಹಳ ಯೋಚನೆ ಮಾಡಿ, ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಕೋಲಾರದ ಸ್ಪರ್ಧೆ ಖಚಿತವಾದೊಡನೆ ಸಿದ್ದರಾಮಯ್ಯ ವಿರುದ್ಧ ಕರಪತ್ರಗಳು ಓಡಾಡುತ್ತಿವೆ. ದಲಿತ ಮತದಾರರ ಜಾಗೃತಿ ಅಭಿಯಾನ ಭುಗಿಲೆದ್ದಿದೆ. ದಲಿತ ನಾಯಕನನ್ನು ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಎಂದು ಕರಪತ್ರ ಹಂಚುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಿದರೆ ದಲಿತ ಸಿಎಂ ಮಾಡುವುದು ಸುಲಭ ಎಂಬ ಕರಪತ್ರ ಕೋಲಾರ ಜಿಲ್ಲೆಯಾದ್ಯಂತ ಓಡಾಡುತ್ತಿವೆ.
ಸಿದ್ದರಾಮಯ್ಯ ಅವರು ಗೆಲ್ಲಲೇಬೇಕು ಅಂದ್ರೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತಗಳು ಬಹಳ ಪ್ರಾಮುಖ್ಯತೆ ಹೊಂದುತ್ತವೆ. ಸಿದ್ದರಾಮಯ್ಯ ಅವರ ಮೇಲೆ ದಲಿತ ನಾಯಕರಿಗೆ ಅವಕಾಶ ಬಿಟ್ಟುಕೊಡಲಿಲ್ಲ ಎಂಬ ಆರೋಪವಿದೆ. ಸಿಎಂ ಸ್ಥಾನದ ರೇಸ್ ನಲ್ಲಿ ಪರಮೇಶ್ವರ್ ಅವರನ್ನು 2013ರ ಚುನಾವಣೆಯಲ್ಲಿ ಸೋಲಿಸಲು ಸಿದ್ದರಾಮಯ್ಯ ಅವರ ಪಾತ್ರವೂ ಇದೆ ಎಂಬ ಆರೋಪವಿದೆ. ಹೀಗಾಗಿ ಕೋಲಾರದಲ್ಲಿ ದಲಿತರು ಅಭಿಯಾನ ಶುರು ಮಾಡಿದ್ದಾರೆ. ಕರಪತ್ರ ಹಂಚಿಕೆಯಾಗುತ್ತಿದೆ.