ಹಾವೇರಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಶುರುವಾಗಿದೆ. ಈಗಾಗಲೇ ಕೆಲವು ಕಡೆ ಗೆಲುವಿನ ನಗೆ ಬೀರಿದ್ದಾರೆ ಅಭ್ಯರ್ಥಿಗಳು.
ಅದರಲ್ಲೂ ಶಿಗ್ಗಾಂವಿ ಕ್ಷೇತ್ರದಲ್ಲಿ ಬರೋ ಬಂಕಾಪುರ ಪುರಸಭೆಯ ಮತ ಏಣಿಕೆ ನಡೆದಿದ್ದು, ಬಂಕಾಪುರ ಪುರಸಭೆ ಇದೀಗ ಕಾಂಗ್ರೆಸ್ ತೆಕ್ಕೆಗೆ ಸಿಕ್ಕಿದೆ.10 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದು ಸಿಎಂ ಬೊಮ್ಮಾಯಿ ಅವರ ಸ್ವಕ್ಷೇತ್ರವಾಗಿದೆ. ಇಲ್ಲಿ ಸೋಲು ಕಂಡಿದ್ದು ಬಿಜೆಪಿಗೆ ಮುಖಭಂಗವಾದಂತಾಗಿದೆ. ಸಿಎಂ ಬೊಮ್ಮಾಯಿ ಅವರ ಸ್ವಕ್ಷೇತ್ರದಲ್ಲೇ ಜನ ಸಿಎಂ ಅವರನ್ನ ಒಪ್ಪಿಕೊಳ್ಳುತ್ತಿಲ್ಲವಾ ಎಂಬ ಪ್ರಶ್ನೆ ಇಂದಿನ ಗೆಲುವಿನಿಂದ ಮೂಡಿದೆ.
ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲೂ ತಮ್ಮದೇ ತವರು ಜಿಲ್ಲೆಯಲ್ಲಿ ಬೊಮ್ಮಾಯಿ ಅವರು ಸೋತಿದ್ರು. ಇದೀಗ ಪುರಸಭೆಯಲ್ಲೂ ತಮ್ಮ ಸ್ವಕ್ಷೇತ್ರದಲ್ಲೇ ಸೋಲಿನ ರುಚಿ ಕಂಡಿದ್ದಾರೆ. ಸಿಎಂ ಸ್ಥಾನ ಅಲಂಕರಿಸಿ ನೂರು ದಿನಗಳ ಯಶಸ್ವಿ ಪಯಣದಿಂದ ಮುಂದೆ ಸಾಗುತ್ತಿದ್ದಾರೆ ಬೊಮ್ಮಾಯಿ ಅವರು. ಇದರ ನಡು ನಡುವೆ ಸಿಎಂ ಬೊಮ್ಮಾಯಿ ಅವರು ಬದಲಾಗ್ತಾರೆ ಅನ್ನೊ ಗಾಳಿ ಸುದ್ದಿ ಕೂಡ ಕೇಳಿ ಬರುತ್ತಿದೆ. ಇದೆಲ್ಲೆದರ ನಡುವೆ ಮುಂದಿನ 2023ರ ವಿಧಾನಸಭಾ ಚುನಾವಣೆ ಕೂಡ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಹಲವರು ವಾದ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಹೀಗೆ ಸ್ವಕ್ಷೇತ್ರದ ಸಪೋರ್ಟ್ ಸಿಗದೇ ಹೋದಲ್ಲಿ ಸಿಎಂ ಅವರ ಮುಂದಿನ ಚುನಾವಣೆಗೆ ಎಪೆಕ್ಟ್ ಹೊಡೆಯಬಹುದು ಎನ್ನಲಾಗಿದೆ.