ಹಣತೆ : ಕೆ.ನಿರ್ಮಲಾ ಮರಡಿಹಳ್ಳಿ ಅವರ ದೀಪಾವಳಿ ಕವನ

suddionenews
1 Min Read

 

ತಣ್ಣಗೆ ಕುಳಿತ ಹಣತೆ
ಮತ್ತೇನನ್ನೂ ಯೋಚಿಸಲಿಲ್ಲ
ನಿಲ್ಲುವಷ್ಟು ಬೆಳಕ
ಹರಿಸುವುದ ಬಿಟ್ಟು

ಸಣ್ಣ ಮುಗುಳ್ನಗೆಯಲ್ಲೇ
ಭೀಕರ ಕತ್ತಲೆಯ
ಮೀರಿ ಚಾಚಿತು
ಮೆದುವಾದ ಬೆಳಕ ಕುಡಿಯು

ಅತ್ತಿತ್ತ ಹೊರಳಾಡಿಸಿ ತನ್ನ
ಕಣ್ಣ ಬಯಸಿದವರಿಗೆ
ಹಿಡಿ ಸಂತಸವ ನೀಡಿ
ಮರೆಮಾಚಿತು ಸುಡುವ ಕರುಕ

ಕಾಣದ ಕೈಯೊಡನೆ
ಆರದೆಯೆ ಉರಿಯಿತು
ನೊಂದ ಭಾವಗಳಿಗೆ
ಭರವಸೆಯ ಜೊತೆಗೆ

ದೀಪದ ದೇಹದಲಿ
ಬೆರೆತೊಂದಾಗಿದೆ ಆತ್ಮ
ಸುಳಿದಾಡುತಿದೆ ಸಕಾರಾತ್ಮಕ ತೇಜ
ಉನ್ನತೋನ್ನತಿಗೇರಲಿ ಸಮಾಜ

ಬೆಳಕಿನ ಹಾರೈಕೆ
ಅನಂತತೆಯ ರೂಪ
ಬದುಕಿನೊಂದಿಗೆ ಸಾಗಲಿ
ಹೊಂಬೆಳಕ ನೋಟ

ಹಬ್ಬುತಲಿ ಹಣತೆಗಳ ಸಾಲು
ತಬ್ಬುತಲಿ ದಿವ್ಯ ಪ್ರಕಾಶನ
ಆತ್ಮ ಆತ್ಮಗಳಲಿ
ಬೆಳಕಾಗಲಿ ದೀಪಾವಳಿ


 ಕೆ.ನಿರ್ಮಲಾ ಮರಡಿಹಳ್ಳಿ, ಚಿತ್ರದುರ್ಗ
ಮೊ.ನಂ: 9901527137

Share This Article
Leave a Comment

Leave a Reply

Your email address will not be published. Required fields are marked *