ಕೊರೊನಾ ಪ್ರಕರಣದಲ್ಲಿ ಇಳಿಕೆ : ಕಳೆದ 24 ಗಂಟೆಯಲ್ಲಿ 61 ಹೊಸ ಕೇಸ್

suddionenews
1 Min Read

ಬೆಂಗಳೂರು: ಕಳೆದ ಒಂದು ವಾರಕ್ಕಿಂತ ಇಂದು ಕೊರೊನಾ ಪ್ರಕರಣದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 61 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಸಂಬಂಧ ಆರೋಗ್ಯ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಈ ಮೂಲಕ ರಾಜ್ಯದಲ್ಲಿ 863 ಕೇಸ್ ಗಳು ಆಕ್ಟೀವ್ ಆಗಿವೆ.

ಕಳೆದ 24 ಗಂಟೆಯಲ್ಲಿ 2369 RTPCR ಟೆಸ್ಟ್, 754 RAT ಟೆಸ್ಟ್ ಮಾಡಲಾಗಿದೆ. ಒಟ್ಟು 3123 ಜನರಿಗೆ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 61 ಜನರಿಗೆ ಕೊರೊನಾ ಇರುವುದು ದೃಢವಾಗಿದೆ. 153 ಜನ ಕೊರೊನಾದಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರು ನಗರದಲ್ಲಿ 30 ಕೇಸ್, ಬೆಳಗಾವಿ -5, ಬಳ್ಳಾರಿ -2, ಬಾಗಲಕೋಟೆ -1, ಚಿಕ್ಕಬಳ್ಳಾಪುರ -1, ಧಾರವಾಡ, ಗದಗ, ಹಾಸನದಲ್ಲಿ ತಲಾ ಒಂದೊಂದು ಕೇಸ್ ಇದ್ದು, ಉತ್ತರಕನ್ನಡ -5, ಶಿವಮೊಗ್ಗ ಹಾಗೂ ವಿಜಯನಗರದಲ್ಲಿ ತಲಾ ಎರಡೆರಡು ಕೇಸ್ ಇದೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾ ಕೇಸ್ ಗಳು ಪತ್ತೆಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *