ಸಾಮಾನ್ಯವಾಗಿ 90% ಜನ ಕಾಫಿ, ಟೀಗೆ ಅಡಿಕ್ಟ್ ಆಗಿರ್ತಾರೆ. ಕಾಫಿ ಟೀ ಇಲ್ಲದೇ ಇರೋದೆ ಇಲ್ಲ. ಆದ್ರೆ ಅದ್ರಿಂದ ಆರೋಗ್ಯಕ್ಕೆ ತುಂಬಾ ಉಪಯೋಗವೇನು ಇಲ್ಲ. ಅದರ ಬದಲು ಕಷಾಯ ಅಭ್ಯಾಸ ಮಾಡಿಕೊಂಡರೆ ಒಂದಷ್ಟು ಉಪಯೋಗವಾಗುತ್ತೆ.
ಅದರಲ್ಲೂ ಗರಿಕೆ ಹುಲ್ಲಿನ ಕಷಾಯ ತುಂಬಾ ಅನುಕೂಲಕರ. ನೀವೂ ಪ್ರತಿದಿನ ಒಂದೆ ಕಷಾಯ ಕುಡಿಯೋದಕ್ಕೆ ಬೇಜಾರು ಅಂದುಕೊಂಡ್ರೆ ವಾರಪೂರ್ತಿ ಒಂದೊಂದು ರೀತಿಯ ಕಷಾಯ ಮಾಡಿಕೊಂಡು ಕುಡಿಯಬಹುದು.
ತಳಸಿ ಎಲೆ ಕಷಾಯ, ಅಮೃತಬಳ್ಳಿ ಕಷಾಯ, ಬಿಲ್ವ ಎಲೆ ಕಷಾಯ, ಹೊಂಗೆ ಮರದ ಎಲೆ ಕಷಾಯ, ಬೇವಿನ ಎಲೆ ಕಷಾಯ, ಅರಳಿಮರದ ಎಲೆ ಕಷಾಯವನ್ನು ಕುಡಿಯಬಹುದು. ಇದರಿಂದ ಸುಮಾರು ಆರು ತಿಂಗಳುಗಳ ಕಾಲ ಯಾವುದೆ ಕಾಯಿಲೆ ನಿಮ್ ಹತ್ರ ಸುಳಿಯಲ್ಲ.
ಅರ್ಧ ಹಿಡಿ ತುಳಸಿ ಎಲೆ ತೆಗೆದುಕೊಳ್ಳಿ ಚೆನ್ನಾಗಿ ತೊಳೆಯಿರಿ ಎರಡು ಲೋಟ ನೀರು ಹಾಕಿ ಒಂದು ಪಾತ್ರೆಗೆ ಹಾಕಿ ಚನ್ನಾಗಿ ಕುದಿಸಿ ಅದಕ್ಕೆ ತೊಳೆದ ತುಳಸಿ ಎಲೆಗಳನ್ನು ನೀರಿಗೆ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ 5 ನಿಮಿಷದ ನಂತರ ಉರಿ ಬಂದು ಮಾಡಿ ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿ ಉಗುರು ಬೆಚ್ಚಗೆ ಇರುವಾಗ ಸ್ವಲ್ಪ ಸ್ವಲ್ಪ ನಿಧಾನವಾಗಿ ಕುಡಿಯಿರಿ.
ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿಯಿರಿ ಈ ಏಳು ಕಷಾಯಗಳಲ್ಲಿ ನಾಲ್ಕನ್ನು ಆರಿಸಿಕೊಂಡು ಚಹಾ ಕಾಫಿ ಕುಡಿಯುವುದನ್ನು ಬಿಟ್ಟು ನಿಮಗೆ ಇಷ್ಟವಾದ ನಾಲ್ಕು ಕಷಾಯಗಳನ್ನು ನಾಲ್ಕು ವಾರ ಕುಡಿಯಿರಿ.