ಅಡಿಕೆ ಬೆಳೆಗಾರರಿಗೆ ಮತ್ತೆ ನಿರಾಸೆಯಾಗಿದೆ. ದರದಲ್ಲಿ ಮತ್ತೆ ಇಳಿಕೆಯಾಗಿದೆ. 55 ಸಾವಿರಕ್ಕೆ ತಲುಪಿದ್ದ ಅಡಿಕೆ ದರ ಈಗ ಮತ್ತೆ ಐದು ಸಾವಿರ ಇಳಿಕೆಯಾಗಿದೆ. ಮಾರುಕಟ್ಟೆಯ ಸದ್ಯ ಬೆಲೆ ಕ್ವಿಂಟಾಲ್ ಅಡಿಕೆ 50 ಸಾವಿರ ರೂಪಾಯಿ ಆಗಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಿಕೆ ಧಾರಣೆ ಕನಿಷ್ಠ 47,600 ರೂಪಾಯಿ ಇದ್ದರೆ ಕನಿಷ್ಠ 48,000ಕ್ಕೆ ಮಾರಾಟವಾಗಿದೆ. ಇನ್ನು ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್ ಗೆ ಕನಿಷ್ಠ 28,600 ಇದ್ದರೆ ಗರಿಷ್ಠ 29,000 ಆಗಿತ್ತು.
ಚಿತ್ರದುರ್ಗದ ಅಪಿ ಅಡಿಕೆ ಕನಿಷ್ಠ ಬೆಲೆ 48,100 ರೂಪಾಯಿಗೆ ಮಾರಾಟವಾಗಿದೆ. ಹಾಗೆ ಬೆಟ್ಟೆ ಅಡಿಕೆ ಕನಿಷ್ಠ ಬೆಲೆ 35,100 ರೂಪಾಯಿಗೆ ಮಾರಾಟವಾಗಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 26,500 ರೂಪಾಯಿ ಇದ್ದು ಗರಿಷ್ಠ ಬೆಲೆ 50,199 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ ಕನಿಷ್ಠ 26,500 ರೂಪಾಯಿಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಕನಿಷ್ಠ 45,199 ರೂಪಾಯಿಗೆ ಮಾರಾಟವಾಗಿದೆ. ಹೊಸನಗರ ಚಾಲಿ ಅಡಿಕೆ ಕನಿಷ್ಠ 28,929 ರೂಪಾಯಿಗೆ ಮಾರಾಟವಾಗಿದೆ. ಕೆಂಪು ಗೋಟು ಅಡಿಕೆ 24,899 ರೂಪಾಯಿಗೆ ಮಾರಾಟವಾಗಿದೆ. ಹಾಗೇ ರಾಶಿ ಅಡಿಕೆ ಕನಿಷ್ಠ 47,699 ರೂಪಾಯಿಗೆ ಮಾರಾಟವಾಗಿದೆ.
ಕೊಬ್ಬರಿ ಬೆಲೆ ಸದ್ಯಕ್ಕೆ ರಾಜ್ಯದಲ್ಕಿ ಸ್ಥಿರತೆ ಕಾಯ್ದುಕೊಂಡಿದೆ. 10 ಸಾವಿರದ ಗಡಿ ದಾಟಿದ್ದ ಕೊಬ್ಬರಿ ಬೆಲೆ ಬಳಿಕ ಅಲ್ಪ ಕುಸಿತ ಕಂಡಿತ್ತು. ರಾಜ್ಯದ ಪ್ರಮುಖ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಾಲ್ ಗೆ ಕನಿಷ್ಠ 9,100 ರೂಪಾಯಿ ಇದ್ದರೆ ಕನಿಷ್ಠ 9,750 ರೂಪಾಯಿಗೆ ಮಾರಾಟವಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 8,200 ರೂಪಾಯಿ ಇದ್ದು ಗರಿಷ್ಠ 9,510 ರೂಪಾಯಿಗೆ ಮಾರಾಟವಾಗಿದೆ.