Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಶಕಗಳ ದಾರಿ ವಿವಾದ ಸುಖಾಂತ್ಯ : ತಹಶಿಲ್ದಾರ್ ರಘುಮೂರ್ತಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

Facebook
Twitter
Telegram
WhatsApp

ಚಳ್ಳಕೆರೆ : ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ದಾರಿ ವಿವಾದವನ್ನು ತಹಶಿಲ್ದಾರರ ನೇತೃತ್ವದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಗೆಹರಿಸಿದ್ದಾರೆ.

ತಾಲೂಕಿನ ಪರಶುರಾಂಪುರ ಹೋಬಳಿ ಮೋದೂರು ಗ್ರಾಮದ ಸರ್ವೆ ನಂಬರ್ 35 ರಲ್ಲಿ ಹಲವು ದಶಕಗಳಿಂದ ಗ್ರಾಮಸ್ಥರು ಓಡಾಡುತ್ತಿದ್ದರು. ಈ ದಾರಿಯಲ್ಲಿ ಕಾಮಸಮುದ್ರ ಗ್ರಾಮದ ಈರಣ್ಣ ಮತ್ತು ಗ್ರಾಮಸ್ಥರಿಗೆ ತೀವ್ರ ವಿವಾದವಿತ್ತು.

ತಾಲೂಕು ಕಚೇರಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಹಲವು ಬಾರಿ ಗ್ರಾಮಸ್ಥರು ಮತ್ತು ಈರಣ್ಣ ಭೇಟಿ ನೀಡಿ ದಾರಿ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಇಂದು ತಹಸಿಲ್ದಾರರು ಏನ್. ರಘುಮೂರ್ತಿ ಹಾಗೂ ಪರಶುರಾಂಪುರ ಪೊಲೀಸ್ ಉಪನಿರೀಕ್ಷಕರಾದ ಸ್ವಾತಿ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸರ್ವೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದ ಗ್ರಾಮಸ್ಥರ ಸಮಕ್ಷಮದಲ್ಲಿ ದಾರಿಯನ್ನು ಅಳತೆ ಮಾಡಿ ಈಗಿರುವಂತೆ ದಾರಿಗೆ ಓಡಾಡಲು ಯಾವುದೇ ನಿರ್ಬಂಧ ಇಲ್ಲದಂತೆ ಗ್ರಾಮಸ್ಥರ ಮನವೊಲಿಸಲಾಯಿತು.

ಗ್ರಾಮಸ್ಥರು ತಹಸಿಲ್ದಾರ್ ಅವರ ಸಲಹೆಯಂತೆ ಈ ದಾರಿಯಲ್ಲಿ ಓಡಾಡಲು ಯಾವುದೇ ಅಡಚಣೆ ಮಾಡುವುದಿಲ್ಲವೆಂದು ಪ್ರಮಾಣೀಕರಿಸಿದರು. ತಹಶೀಲ್ದಾರ್ ರವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಅದರಂತೆ ಗ್ರಾಮದ ಎಲ್ಲರ ಸಮಕ್ಷಮದಲ್ಲಿ ವಿವಾದದ ದಾರಿಯನ್ನು ಸಾರ್ವಜನಿಕರಿಗೆ ಓಡಾಡಲು ಮುಕ್ತಗೊಳಿಸಲಾಯಿತು. ಗ್ರಾಮದಲ್ಲಿ ಸಾಮರಸ್ಯವನ್ನು ಉಳಿಸಿಕೊಳ್ಳುವಂತೆ ಯಾವುದೇ ವಿವಾದಗಳು ಉಂಟಾಗದಂತೆ ಕ್ರಮವಹಿಸಲು ಗ್ರಾಮಸ್ಥರಿಗೆ ತಹಸಿಲ್ದಾರ್ ಎಂ ರಘುಮೂರ್ತಿ ತಿಳಿಸಿದರು.

ಇದೇ ಏಪ್ರಿಲ್ 14 ರಂದು ದೇಶ ವ್ಯಾಪ್ತಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವಂತಹ ಇಂತಹ ಕೃತ್ಯಗಳು ಮತ್ತು ನಡವಳಿಕೆಗಳು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಧಕ್ಕೆ ಉಂಟುಮಾಡುತ್ತವೆ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ. ಜಾತಿ ವ್ಯಕ್ತಿ ಮತ್ತು ಪಕ್ಷ ರಹಿತವಾದ  ಸಮಾಜ ನಿರ್ಮಾಣವಾಗಬೇಕಿದೆ. ದುರ್ಬಲ ವರ್ಗದವರಿಗೆ ಸರ್ಕಾರವುಸರ್ಕಾರವು ಅದೆಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಡಾ. ಭೀಮರಾವ್ ಅಂಬೇಡ್ಕರ್ ಆಶಯಗಳು ಇವತ್ತಿಗೆ ಅನುಷ್ಠಾನಗೊಳಿಸಬೇಕಿದೆ. ಸಮಾಜದಲ್ಲಿ ಭಾತೃತ್ವ, ಸಮಾನತೆ ಮತ್ತು ಸಹಬಾಳ್ವೆ ಪುನರ್ ಸ್ಥಾಪಿಸಲಾಗಿದೆ. ಈ ದಿಕ್ಕಿನಲ್ಲಿ ಗ್ರಾಮಸ್ಥರು ಚಿಂತಿಸಿ ಎಲ್ಲಿಯೂ ಕೂಡ ಮುಂದೆ ಇಂಥ ಕೃತ್ಯಗಳು ಕಂಡು ಬರಬಾರದು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!