ದೆಹಲಿ: ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ ಮೇಲೆ ದಾಖಲೆಯನ್ನ ಬರೆಯುತ್ತಿದ್ದಾರೆ. ಸಿಎಂ ಆಗಿ ದೇವರಾಜ್ ಅರಸು ಅವರ ದಾಖಲೆಯನ್ನ ಮುರಿದರು. ಬಜೆಟ್ ಮಂಡನೆಯಲ್ಲಿ ಹೆಚ್ಚು ಮಂಡಿಸಿದವರು ಎಂಬ ದಾಖಲೆಯನ್ನು ಬರೆದಿದ್ದಾರೆ. ಸದ್ಯ ಬಜೆಟ್ ಮೇಲಿನ ಸೆಷನ್ಸ್ ನಡೀತಾ ಇದೆ. ಇದರ ನಡುವೆ ಮತ್ತೆ ಅಧಿಕಾರದ ಕಿಚ್ಚು ಹೊತ್ತಿಕೊಂಡಿದೆ.
ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತ ಕಾಯ್ತಾ ಇದ್ದಾರೆ. ಆದರೆ ಅದು ಸಾಧ್ಯ ಆಗ್ತಾ ಇಲ್ಲ. ಡಿಕೆಶಿ ಬಣದವರು ಅಂದು ಕೊಟ್ಟ ಮಾತಂತೆ ಅಧಿಕಾರವನ್ನು ಬಿಟ್ಟು ಕೊಡಲಿ ಎನ್ನುತ್ತಿದ್ದಾರೆ. ಆದರೆ ಸಿಎಂ ಬಣದವರು ಅವರೇ ಸಿಎಂ ಆಗಿರ್ತಾರೆ ಅಂತಿದ್ದಾರೆ. ಇನ್ನು ಬಜೆಟ್ ಬಳಿಕ ಹೈಕಮಾಂಡ್ ನಾಯಕರು ಒಪ್ಪಿದ್ರೆ ಮುಂದಿನ ಎರಡು ಬಜೆಟ್ ನಾನೇ ಮಂಡಿಸುತ್ತೇನೆ ಎಂಬ ಮಾತನ್ನು ಹೇಳಿದ್ದರು. ಆ ಕಾರಣದಿಂದ ಸಾಕಷ್ಟು ಚರ್ಚೆ ಶುರುವಾಗಿದೆ.
ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಖರ್ಗೆ ಅವರ ಜೊತೆಗೆ ಟ್ರಾವೆಲ್ ಮಾಡಿದ್ದಾರೆ. ಆಗಲೂ ಅಧಿಕಾರ ಹಂಚಿಕೆಯ ಬಗ್ಗೆ ಒಂದಷ್ಟು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಇಂದು ಡಿಕೆ ಶಿವಕುಮಾರ್ ಅವರು ಸಹ ದೆಹಲಿಗೆ ಭೇಟಿ ನೀಡಿದ್ದಾರೆ. ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, ಕೆಪಿಸಿಸಿ ಅಧ್ಯಕ್ಷನಾಗಿ ನಾಳೆಗೆ ಆರು ವರ್ಷಗಳು ತುಂಬುತ್ತಿದೆ. ಹೀಗಾಗಿ ನಾಳೆ ಮೊದಲ ಬಾರಿ ಗೆದ್ದವರಿಗೂ ಔತಣಕೂಟಕ್ಕೆ ಕರೀತಾ ಇದ್ದೀನಿ. ಸೆಷನ್ ನಡೀತಾ ಇರೋದ್ರಿಂದ ಇನ್ನುಳಿದವರಿಗೂ ಆಮೇಲೆ ಆಹ್ವಾನ ಮಾಡ್ತೇನೆ. ಹೇಳಬೇಕಾದ್ದೆಲ್ಲವನ್ನು ಹೈಕಮಾಂಡ್ ತಿಳಿಸಿದ್ದೇನೆ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ವಿಚಾರದ ಬಗ್ಗೆ ಕ್ಲಾರಿಟಿಯನ್ನ ನೀಡಿದ್ದಾರೆ.





