ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಸ್ಥಾನಿಕ ಅಧಿಕಾರಿ, ಅಧೀಕ್ಷಕ ಸೇರಿದಂತೆ ನಾಲ್ವರಿಗೆ ಕರ್ತವ್ಯ ಲೋಪದಡಿ ನೋಟೀಸ್ ಜಾರಿ ಮಾಡಲಾಗಿದೆ. ವಿಮ್ಸ್ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ರವಿ ಭೀಮಪ್ಪ. ವೈದ್ಯಕೀಯ ಅಧೀಕ್ಷಕರಾದ ಡಾ. ಯೋಗೀಶ್, ಡ್ಯೂಟಿ ಡಾಕ್ಟರ್ ಮಲ್ಲಿಕಾರ್ಜುನ ರೆಡ್ಡಿ, ನರ್ಸಿಂಗ್ ವಿಭಾಗದ ಅಧೀಕ್ಷಕಿ ನಾಗರತ್ನಗೆ ನೋಟೀಸ್ ಜಾರಿ ಮಾಡಲಾಗಿದೆ.
ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಸಂಪರ್ಕ ಕಡಿತವಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಜನರೇಟರ್ ಕೈಕೊಟ್ಟಿತ್ತು. ವೆಂಟಿಲೇಟರ್ ಜನರೇಟರ್ ಒಂದು ಗಂಟೆ ಮಾತ್ರ ಬಂದಿದೆ. ರೋಗಿಗಳ ಸಂಬಂಧಿಕರು ಹೇಳಿದರು ಅದೆ ಗಂಭೀರತೆ ತಿಳಿಯಲ್ಲವೇ ಎಂದು ಪ್ರಶ್ನಿಸಿ ವಿಮ್ಸ್ ನ ನಾಲ್ವರು ಹಿರಿಯ ಸಿಬ್ಬಂದಿಗೆ ನಿರ್ದೇಶಕರಿಂದ ನೋಟೀಸ್ ನೀಡಲಾಗಿದೆ. ವಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಗಿರಿಗಂಗಾಧರಗೌಡರಿಂದ ನೋಟೀಸ್ ಜಾರಿಮಾಡಲಾಗಿದೆ.