ಮಿನಿ ವಿಧಾನಸೌಧವನ್ನೇ ಮಾರಾಟಕ್ಕಿಟ್ಟಿದ್ದ ರೈತನ ಸಾವು..!

suddionenews
1 Min Read

ವಿಜಯಪುರ: ನಾಪತ್ತೆಯಾಗಿದ್ದ ರೈತ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹೂವಿನಡಗಲಿಯಲ್ಲಿ ನಡೆದಿದೆ. ಬಣಕಾರ್ ಮಲ್ಲಪ್ಪ ಮೃತ ರೈತ. ಬಣಕಾರ್ ಮಲ್ಲಪ್ಪ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಣಕಾರ್ ಮಲ್ಲಪ್ಪ ಹೂವಿನಡಗಲಿಯ ನಂದಿಹಳ್ಳಿ ಗ್ರಾಮದವರು. ಇವರ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣವನ್ನ ವಿರೋಧಿಸಿದ್ದರು. ಅದಕ್ಕಾಗಿ ಸಾಕಷ್ಟು ಹೋರಾಟವನ್ನು ಮಾಡಿದ್ದವರು. ಅಷ್ಟೇ ಅಲ್ಲ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿದ್ದವರ ವಿರುದ್ಧ ಹೋರಾಟ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಶವವಾಗಿ ಪತ್ತೆಯಾಗಿದ್ದಾರೆ.

ತಮ್ಮ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಮಿ‌ಜ ವಿಧಾನಸೌಧ ವಿರೋಧಿಸಿದ್ದರು. ಪರಿಹಾರ ನೀಡುವಂತೆ ಒತ್ತಾಯಿಸಿ, ಪ್ರತಿಭಟನೆ ಕೂಡ ಮಾಡಿದ್ದರು. ಅಧಿಕಾರಿಗಳ ವಿರುದ್ಧ ಹೈಕೋರ್ಟ್ ತನಕ ಹೋಗಿದ್ದರು. ಆದ್ರೆ ಜನವರಿ 30ರಂದು ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದರು. ಜ.31ರಂದು ಈ ಸಂಬಂಧ ಹೂವಿನಡಗಲಿಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಇದೀಗ ಶವ ಪತ್ತೆಯಾಗಿದ್ದು, ಶವದ ಪಕ್ಕ ವಿಷದ ಬಾಟೆಲ್ ಕೂಡ ಪತ್ತೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *